ADVERTISEMENT

ಆನ್‌ಲೈನ್‌ ಮೂಲಕ ಬೆಳೆ ವಿಮೆ ನೋಂದಣಿ

ಹೊಸ ತಂತ್ರಾಂಶ ‘ಸಂರಕ್ಷಣೆ’ಗೆ ಸಿಎಂ ಚಾಲನೆ

​ಪ್ರಜಾವಾಣಿ ವಾರ್ತೆ
Published 30 ಜೂನ್ 2016, 19:30 IST
Last Updated 30 ಜೂನ್ 2016, 19:30 IST

ಬೆಂಗಳೂರು: ರೈತರು ಆನ್‌ಲೈನ್‌ ಮೂಲಕ ಬೆಳೆ ವಿಮೆ ನೋಂದಣಿ ಮಾಡಲು ‘ಸಂರಕ್ಷಣೆ’ ಎಂಬ ನೂತನ ತಂತ್ರಾಂಶವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ಬಿಡುಗಡೆ ಮಾಡಿದರು.

ದಣಿಗೆ ಬ್ಯಾಂಕ್‌ಗಳ ನೆರವು ಪಡೆಯಬೇಕಾಗುತ್ತದೆ. ನೇರವಾಗಿ ನೋಂದಣಿ ಮಾಡಲು ಸಾಧ್ಯವಿಲ್ಲ.  ಆದರೆ, ವಿಮೆಗೆ ಸಂಬಂಧಿಸಿದ ಎಲ್ಲ ಮಾಹಿತಿಗಳನ್ನೂ ವೆಬ್‌ಸೈಟ್‌ನಲ್ಲಿ ನೋಡಬಹುದಾಗಿದೆ.

ತಂತ್ರಾಂಶದ ಬಿಡುಗಡೆ ಬಳಿಕ ಕೃಷಿ ಸಚಿವ ಕೃಷ್ಣಬೈರೇಗೌಡ ಅವರು ಸುದ್ದಿಗಾರರಿಗೆ ಹೊಸ ತಂತ್ರಾಂಶದ ಕುರಿತು ಮಾಹಿತಿ ನೀಡಿದರು.
ಕರ್ನಾಟಕ ರೈತ ಪ್ರಧಾನಮಂತ್ರಿ ಫಸಲ್‌ ಬಿಮಾ ಯೋಜನೆ (ಇಳುವರಿ ಆಧಾರಿತ) ಮತ್ತು  ಹವಾಮಾನ  ಆಧಾರಿತ  ಬೆಳೆ ವಿಮಾ ಯೋಜನೆಯನ್ನು ಈ ತಂತ್ರಾಂಶಕ್ಕೆ ಅಳವಡಿಸಲಾಗಿದೆ. ಎಲ್ಲಾ ಅಧಿಸೂಚಿತ ಬೆಳೆಗಳಿಗೆ ವಾಣಿಜ್ಯ ವಿಮಾ ಕಂತಿನ ದರಗಳ ಅನ್ವಯವಾಗುತ್ತವೆ ಎಂದು ಹೇಳಿದರು.

ಈ ಯೋಜನೆಗೆ ರಾಜ್ಯ ಸರ್ಕಾರವು ₹ 675.38 ಕೋಟಿ ಮೀಸಲಿರಿಸಿದೆ.  ಪ್ರಸ್ತುತ  ಶೇ 12 ರಿಂದ 15 ರಷ್ಟು ರೈತರು ಬೆಳೆ ವಿಮೆಗೆ ಒಳಪಡುತ್ತಿದ್ದು, ಈ ವರ್ಷ ಇದನ್ನು ಶೇ 25 ಕ್ಕೆ ಹೆಚ್ಚಿಸಲು ಕ್ರಮಕೈಗೊಳ್ಳಲಾಗಿದೆ ಎಂದರು. ಬೆಳೆ ವಿಮೆ ನೋಂದಣಿಯನ್ನು ‘ಸಂರಕ್ಷಣೆ’ www.samrakshne.karnataka.govt.in ರಲ್ಲಿ ಮಾಡಬಹುದು.

ವಿಮಾ ಕಂತು ಪಾವತಿಗೆ ಜುಲೈ 30 ಕೊನೆ ದಿನ
‘ಕರ್ನಾಟಕ ರೈತ  ಸುರಕ್ಷಾ ಪ್ರಧಾನ ಮಂತ್ರಿ ಫಸಲ್‌ ಬಿಮಾ ಯೋಜನೆ’ಯಡಿ  ವಿಮಾ ಕಂತು ಪಾವತಿಸಲು ಜುಲೈ 30 ಕೊನೆಯ ದಿನ. ಅದೇ ರೀತಿ ‘ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ’ಯಡಿ  ವಿಮಾ ಕಂತು ಪಾವತಿಸಲು ಜುಲೈ 10 ಕಡೆಯ ದಿನ ಎಂದು ಸಚಿವ ಕೃಷ್ಣಬೈರೇಗೌಡ ಹೇಳಿದರು.

ತಂತ್ರಾಂಶದ ಪ್ರಯೋಜನಗಳು
* ಬ್ಯಾಂಕುಗಳಲ್ಲಿ ಆಗಬಹುದಾದ ತಪ್ಪುಗಳನ್ನು ಸಂಪೂರ್ಣವಾಗಿ ತಡೆಗಟ್ಟಬಹುದು.

* ರೈತರು ಬೆಳೆ ವಿಮೆಗೆ ಹಳ್ಳಿ, ಗ್ರಾಮಪಂಚಾಯ್ತಿ, ತಾಲ್ಲೂಕು, ಬೆಳೆವಾರು ನೋಂದಾಯಿಸಿರುವ ವಿವರಗಳನ್ನು ಪ್ರತಿ ದಿನವೂ ನೋಡಬಹುದು.
* ಬೆಳೆ ಕಟಾವು ಪ್ರಯೋಗಗಳಲ್ಲಿ ನಡೆಯಬಹುದಾದ ತಪ್ಪು ಅಥವಾ ಮಾರ್ಪಾಡುಗಳನ್ನು ಕಡಿಮೆಗೊಳಿಸಬಹುದು.
* ರೈತರು ಬೆಳೆ ವಿಮೆ ಮಾಡಿಸಿಕೊಳ್ಳುವ ಹಂತದಿಂದ ಹಣ ಪಾವತಿಸುವ ಹಂತದವರೆಗೆ 3–4 ತಿಂಗಳ ಅವಧಿಯನ್ನು ಕಡಿಮೆ ಮಾಡಿ ತ್ವರಿತವಾಗಿ ವಿಮೆ ಹಣ ಪಾವತಿಸಬಹುದು.
* ಬೆಳೆ ವಿಮೆ ಯೋಜನೆ ಜಾರಿಯಲ್ಲಿ ನಡೆಯಬಹುದಾದ ಅವ್ಯವಹಾರಗಳಾದ, ಬೆಳೆ ಕಟಾವು ಪ್ರಯೋಗದಲ್ಲಿನ ಮಾರ್ಪಾಡು, ಒಂದಕ್ಕಿಂತ ಹೆಚ್ಚು ಬಾರಿ ಹಣ ಪಾವತಿ, ನಕಲಿ ವಿಮೆ ಮೂಲಕ ದುರುಪಯೋಗ ತಡೆಗಟ್ಟಬಹುದು.
* ವಾಸ್ತವಿಕ ವಿಮಾ ಕಂತು ಅಂದಾಜು ಶೇ 10 ಇದ್ದು, ರೈತರು 27 ಆಹಾರ ಮತ್ತು ಎಣ್ಣೆಕಾಳುಗಳು ಬೆಳೆಗಳಿಗೆ ಶೇ 2 ರಷ್ಟು ಮತ್ತು  ವಾಣಿಜ್ಯ ಮತ್ತು ತೋಟಗಾರಿಕಾ ಬೆಳೆಗಳಿಗೆ ಶೇ 5 ರಷ್ಟು ಪಾವತಿಸಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT