ADVERTISEMENT

ಕೊಂಕಣಿ ಅಕಾಡೆಮಿ: ಪ್ರಶಸ್ತಿಗೆ ಅರ್ಜಿ ಆಹ್ವಾನ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2014, 19:30 IST
Last Updated 4 ಡಿಸೆಂಬರ್ 2014, 19:30 IST

ಮಂಗಳೂರು: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು 2014ನೇ ಸಾಲಿನ ಕೊಂಕಣಿ ಸಾಹಿತ್ಯ, ಕಲೆ, ಜನಪದ ವಿಭಾಗಗಳ ಅರ್ಹ ಹಿರಿಯರಿಂದ ಗೌರವ ಪ್ರಶಸ್ತಿಗಾಗಿ ಅರ್ಜಿ ಆಹ್ವಾನಿಸಿದೆ.

2014ರಲ್ಲಿ ಪ್ರಕಟವಾದ ಭಾಷಾಂತರ, ಕೊಂಕಣಿ ಕವನ, ಲೇಖನ ಅಥವಾ  ವಿಮರ್ಶೆ ಹಾಗೂ ಕೊಂಕಣಿ ಸಣ್ಣಕತೆ, ಕಾದಂಬರಿ, ಅಧ್ಯಯನ ಕೃತಿಗಳಿಗೆ ಬಹುಮಾನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.

ಇದೇ 15ರೊಳಗೆ ಅರ್ಜಿಯನ್ನು ರಿಜಿಸ್ಟ್ರಾರ್‌, ಕರ್ನಾಟಕ  ಕೊಂಕಣಿ  ಸಾಹಿತ್ಯ  ಅಕಾಡೆಮಿ, ಮಹಾನಗರ ಪಾಲಿಕೆ ಕಟ್ಟಡ, ಲಾಲ್‌ಬಾಗ್‌, ಮಂಗಳೂರು–-3 ಇವರಿಗೆ  ಕಳುಹಿಸಿ ಕೊಡಬೇಕು. ಮಾಹಿತಿಗೆ 0824– 2453167 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.