ADVERTISEMENT

ಕ್ರಿಕೆಟ್ ಬೆಟ್ಟಿಂಗ್‌ ‌ಎಂಟು ಮಂದಿ ಬಂಧನ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2017, 20:15 IST
Last Updated 23 ಏಪ್ರಿಲ್ 2017, 20:15 IST

ಬೆಳಗಾವಿ/ಧಾರವಾಡ:  ಡೆಲ್ಲಿ ಡೇರ್ ಡೆವಿಲ್ಸ್‌ ಮತ್ತು ಮುಂಬೈ ಇಂಡಿಯನ್ಸ್‌ ತಂಡಗಳ ನಡುವಿನ ಐಪಿಎಲ್‌ ಕ್ರಿಕೆಟ್‌ ಪಂದ್ಯದ ವೇಳೆ ಬೆಟ್ಟಿಂಗ್‌ನಲ್ಲಿ ತೊಡಗಿದ್ದ ಏಳು ಮಂದಿಯನ್ನು ಬೆಳಗಾವಿಯಲ್ಲಿ ಮತ್ತು ಒಬ್ಬ ವ್ಯಕ್ತಿಯನ್ನು ಧಾರವಾಡದಲ್ಲಿ ಶನಿವಾರ ತಡರಾತ್ರಿ ಪೊಲೀಸರು ಬಂಧಿಸಿದ್ದಾರೆ.

ಬೆಳಗಾವಿಯ ಶಹಾಪುರ ಹಾಗೂ ಮಾರ್ಕೆಟ್‌ ಠಾಣೆ ವ್ಯಾಪ್ತಿಯಲ್ಲಿ ಬೆಟ್ಟಿಂಗ್‌ನಲ್ಲಿ ತೊಡಗಿದ್ದ ಆರೋಪದ ಮೇಲೆ ಏಳು ಮಂದಿಯನ್ನು ಪೊಲೀಸರು ಬಂಧಿಸಿ, ₹ 59,680 ನಗದು ವಶಪಡಿಸಿಕೊಂಡಿದ್ದಾರೆ.

ವಡಗಾವಿಯ ಸಂಭಾಜಿ ನಗರದ ವಿನಯ ರಾಯಕರ, ಶಹಾಪುರದ ಜೇಡ ಗಲ್ಲಿಯ ಸಂತೋಷ ವೆರ್ಣೇಕರ, ಹೊಸೂರಮಠ ಗಲ್ಲಿಯ ಆನಂದ ವೆರ್ಣೇಕರ, ಖಾಸ್‌ಬಾಗ್‌ ಬಸವಣ್ಣ ಗಲ್ಲಿಯ ಆನಂದ ಕಾಕತಿ, ಹುಬ್ಬಳ್ಳಿಯ ಕೃಷ್ಣ ಬಿ. ಕಬಾಡಿ ಹಾಗೂ  ಬೆಳಗಾವಿಯ ವಿಜಯ ಪಾವಲೆ, ಗಜಾನನ ಮಾನೆ ಅವರನ್ನು ಬಂಧಿಸಲಾಗಿದೆ.

ADVERTISEMENT

ಯುವಕನ ಬಂಧನ: ಧಾರವಾಡದ ನವಲೂರು ಬಳಿ, ಬೆಟ್ಟಿಂಗ್‌ನಲ್ಲಿ ತೊಡಗಿದ್ದ ಸುರೇಶ್‌ ಬಾಳಿ ಎಂಬುವವರನ್ನು ಸಿಸಿಬಿ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ. ಬಂಧಿತನಿಂದ ಐದು ಮೊಬೈಲ್‌, ಒಂದು ಟಿ.ವಿ. ಹಾಗೂ ಒಂದು ಚೀಟಿ ಮತ್ತು  ₹ 9,300 ನಗದು ವಶಪಡಿಸಿಕೊಂಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ವಿದ್ಯಾಗಿರಿ ಠಾಣೆಯಲ್ಲಿ ದೂರು ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.