ADVERTISEMENT

ಜೇಮ್ಸ್‌ ಬಾಂಡ್ ಚಿತ್ರದಲ್ಲೂ ಬೆತ್ತಲೆ ನಟಿಸಲಾರೆ: ಸಂಜನಾ

​ಪ್ರಜಾವಾಣಿ ವಾರ್ತೆ
Published 20 ಜುಲೈ 2017, 19:30 IST
Last Updated 20 ಜುಲೈ 2017, 19:30 IST
ಜೇಮ್ಸ್‌ ಬಾಂಡ್ ಚಿತ್ರದಲ್ಲೂ ಬೆತ್ತಲೆ ನಟಿಸಲಾರೆ: ಸಂಜನಾ
ಜೇಮ್ಸ್‌ ಬಾಂಡ್ ಚಿತ್ರದಲ್ಲೂ ಬೆತ್ತಲೆ ನಟಿಸಲಾರೆ: ಸಂಜನಾ   

ಬೆಂಗಳೂರು: ಶ್ರೀನಿವಾಸ್‌ ರಾಜು ನಿರ್ದೇಶನ ‘2’ ಸಿನಿಮಾದಲ್ಲಿ ಬೆತ್ತಲಾಗಿ ನಟಿಸಿದ ಆರೋಪ ಎದುರಿಸುತ್ತಿರುವ ನಟಿ ಸಂಜನಾ ಗಲ್ರಾನಿ ಅವರು, ‘ಜೇಮ್ಸ್‌ ಬಾಂಡ್‌ ಚಿತ್ರದಲ್ಲಿ ಕೂಡ ನಾನು ಪೂರ್ತಿ ಬೆತ್ತಲಾಗಿ ನಟಿಸಲಾರೆ’ ಎಂದು ಹೇಳಿದ್ದಾರೆ.

ತಾವು ‘2’ ಚಿತ್ರದಲ್ಲಿ ಬೆತ್ತಲಾಗಿ ನಟಿಸಿದ್ದು ಎಂದು ಹೇಳಲಾದ ದೃಶ್ಯಾವಳಿ ಸತ್ಯವಲ್ಲ, ಅದು ತಿರುಚಿದ್ದು ಎಂದು ಸಂಜನಾ ಫೇಸ್‌ಬುಕ್‌ನಲ್ಲಿ ಗುರುವಾರ ಬರೆದಿದ್ದಾರೆ.

‘ನಾನು ವೃತ್ತಿಪರ ನಟಿ. ನನ್ನ ಪಾತ್ರಕ್ಕೆ ನ್ಯಾಯ ಕೊಡಿಸಬೇಕು ಎಂಬ ಒತ್ತಡ ನನ್ನಲ್ಲಿದೆ. ಆದರೆ ನನ್ನ ಸಂಸ್ಕೃತಿ ಹಾಗೂ ಹೆಣ್ತನದ ಬಗ್ಗೆ ಗೌರವ ಇದೆ. ಸಿನಿಮಾ ಚಿತ್ರೀಕರಣ ವೇಳೆ ನಾನು ಗ್ಲಾಮರಸ್ ಆಗಿರುವ ಚಿಕ್ಕ ಸ್ಕರ್ಟ್‌ ಹಾಗೂ ಬೆನ್ನು ಕಾಣುವಂತಹ ಟಾಪ್‌ ಧರಿಸಿದ್ದೆ. ದೇಶದಲ್ಲಿನ ಶೇಕಡ 95ರಷ್ಟು ನಟಿಯರು ಇಂತಹ ಬಟ್ಟೆ ಧರಿಸಿದ್ದಾರೆ’ ಎಂದು ಸಂಜನಾ ಅವರು ತಮ್ಮ ಫೇಸ್‌ಬುಕ್‌ ಪುಟದಲ್ಲಿ ಬರೆದಿದ್ದಾರೆ.

ADVERTISEMENT

‘ನಾನು ಬಟ್ಟೆ ಧರಿಸಿರುವುದನ್ನು ದೃಶ್ಯಾವಳಿಯಲ್ಲಿ ತಿರುಚಲಾಗಿದೆ. ಇದು ನನ್ನ ಚಾರಿತ್ರ್ಯವಧೆಗೆ ಸಮ. ಹೀಗೆ ಮಾಡಿ ಪ್ರಚಾರ ಗಿಟ್ಟಿಸಿಕೊಳ್ಳಬೇಕಾದ ಅವಶ್ಯಕತೆ ನನಗೆ ಇನಿತೂ ಇಲ್ಲ’ ಎಂದೂ ಅವರು ಹೇಳಿಕೊಂಡಿದ್ದಾರೆ.

ಸಂಜನಾ ಅವರು ಬೆತ್ತಲಾಗಿ ನಟಿಸಿದ್ದಾರೆ ಎನ್ನಲಾದ ದೃಶ್ಯವು ವೈರಲ್ ಆಗಿದೆ. ಈ ದೃಶ್ಯವು ‘2’ ಚಿತ್ರದಲ್ಲಿ ಇತ್ತು, ಆದರೆ ಇದಕ್ಕೆ ಸೆನ್ಸಾರ್‌ ಮಂಡಳಿ ಕತ್ತರಿ ಹಾಕಿತ್ತು ಎನ್ನಲಾಗಿದೆ. ಬೆತ್ತಲಾಗಿ ನಟಿಸಿದ್ದಾರೆ ಎನ್ನಲಾದ ದೃಶ್ಯದ ಬಗ್ಗೆ ರಾಜ್ಯ ಮಹಿಳಾ ಆಯೋಗ ಆಕ್ಷೇಪ ವ್ಯಕ್ತಪಡಿಸಿದೆ. ಅಲ್ಲದೆ, ತಿರುಚಿದ ದೃಶ್ಯವನ್ನು ಸೋರಿಕೆ ಮಾಡಿರುವ ಕುರಿತು ಕರ್ನಾಟಕ ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡುವುದಾಗಿ ಸಂಜನಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.