ADVERTISEMENT

ತುಂಗಭದ್ರಾ ಕಾಲುವೆ ದುರಸ್ತಿ: ನೀರು ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 24 ಜುಲೈ 2016, 20:08 IST
Last Updated 24 ಜುಲೈ 2016, 20:08 IST
ಕಂಪ್ಲಿ ಸಮೀಪದ ತುಂಗಭದ್ರಾ ಬಲದಂಡೆ ಕೆಳಮಟ್ಟದ ಕಾಲುವೆಯಲ್ಲಿ ಕಾಣಿಸಿಕೊಂಡ ಬಿರುಕು ಮುಚ್ಚಿ ಭದ್ರಪಡಿಸುವ ಕಾಮಗಾರಿ ಭಾನುವಾರ ಭರದಿಂದ ನಡೆಯಿತು
ಕಂಪ್ಲಿ ಸಮೀಪದ ತುಂಗಭದ್ರಾ ಬಲದಂಡೆ ಕೆಳಮಟ್ಟದ ಕಾಲುವೆಯಲ್ಲಿ ಕಾಣಿಸಿಕೊಂಡ ಬಿರುಕು ಮುಚ್ಚಿ ಭದ್ರಪಡಿಸುವ ಕಾಮಗಾರಿ ಭಾನುವಾರ ಭರದಿಂದ ನಡೆಯಿತು   

ಕಂಪ್ಲಿ (ಬಳ್ಳಾರಿ ಜಿಲ್ಲೆ): ಸಮೀಪದ ಬುಕ್ಕಸಾಗರ ತೋಟಗಾರಿಕೆ ಫಾರಂ ಹಿಂಭಾಗದಲ್ಲಿರುವ ತುಂಗಭದ್ರಾ ಬಲದಂಡೆ ಕೆಳಮಟ್ಟದ ಕಾಲುವೆಯ (ಎಲ್‌ಎಲ್‌ಸಿ) ರಕ್ಷಣಾ ಗೋಡೆಯಲ್ಲಿ ಬಿಟ್ಟಿದ್ದ ಬಿರುಕನ್ನು ಭಾನುವಾರ ದುರಸ್ತಿಗೊಳಿಸಲಾಯಿತು.

‘ದುರಸ್ತಿ ಕಾರ್ಯ ಭಾನುವಾರ ಮಧ್ಯಾಹ್ನ ವೇಳೆಗೆ ಪೂರ್ಣಗೊಂಡಿದ್ದು, ಸಂಜೆ 4ರಿಂದ ತುಂಗಭದ್ರಾ ಜಲಾಶಯದಿಂದ ಬಳ್ಳಾರಿ ಮತ್ತು ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯ ಪಾಲಿನ 1680 ಕ್ಯುಸೆಕ್‌ ಪ್ರಮಾಣದಲ್ಲಿ ನೀರನ್ನು ಕಾಲುವೆಗೆ ಬಿಡುಗಡೆ ಮಾಡಲಾಗಿದೆ’ ಎಂದು ತುಂಗಭದ್ರಾ ಮಂಡಳಿ ಕಾರ್ಯದರ್ಶಿ ಡಿ. ರಂಗಾರೆಡ್ಡಿ ತಿಳಿಸಿದರು.

‘ಕಾಲುವೆ ರಕ್ಷಣಾ ಗೋಡೆಯ ಹೊರ ಭಾಗದ ಬಾಕಿ ಕಾಮಗಾರಿ ಮಂಗಳವಾರ ಪೂರ್ಣಗೊಳ್ಳಲಿದೆ’ ಎಂದು ಮಂಡಳಿ ಸೂಪರಿಂಟೆಂಡೆಂಟ್‌ ಎಂಜನಿಯರ್‌ ಪಿ. ಶಶಿಭೂಷಣರಾವ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.