ADVERTISEMENT

ದಸರಾಕ್ಕೆ ವಿಶೇಷ ರೈಲು ಸಂಚಾರ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2017, 20:34 IST
Last Updated 14 ಸೆಪ್ಟೆಂಬರ್ 2017, 20:34 IST

ಹುಬ್ಬಳ್ಳಿ: ದಸರಾ ವೇಳೆ ಉಂಟಾಗುವ ದಟ್ಟಣೆ ನಿವಾರಿಸಲು ನೈರುತ್ಯ ರೈಲ್ವೆಯು ಯಶವಂತಪುರ– ಬೆಳಗಾವಿ ಮಧ್ಯೆ ವಿಶೇಷ ರೈಲನ್ನು ಓಡಿಸಲಿದೆ.

ಇದೇ 28ರಂದು ಯಶವಂತಪುರದಿಂದ ರಾತ್ರಿ 8.15ಕ್ಕೆ ಹೊರಡುವ ರೈಲು (06581) 29ರಂದು ಬೆಳಿಗ್ಗೆ 8.10ಕ್ಕೆ ಬೆಳಗಾವಿ ತಲುಪಲಿದೆ. ಅ. 2ರಂದು ಬೆಳಗಾವಿಯಿಂದ ಸಂಜೆ 7.10ಕ್ಕೆ ಹೊರಡುವ ರೈಲು (06582) ಮರುದಿನ ಬೆಳಿಗ್ಗೆ 6.20ಕ್ಕೆ ಯಶವಂತಪುರ ತಲುಪಲಿದೆ. ಈ ರೈಲಿನಲ್ಲಿ ಪ್ರಯಾಣಿಸುವವರು ತತ್ಕಾಲ್‌ ದರ ಕೊಟ್ಟು ಬುಕ್ಕಿಂಗ್‌ ಮಾಡಿಸಬೇಕು ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT