ADVERTISEMENT

ಬಣಕಲ್‌ನಲ್‌ನಲ್ಲಿ ಕಾಣಿಸಿಕೊಂಡ ಕುದುರೆಗಳು

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2017, 19:30 IST
Last Updated 19 ಆಗಸ್ಟ್ 2017, 19:30 IST
ಬಣಕಲ್‌ನಲ್‌ನಲ್ಲಿ ಕಾಣಿಸಿಕೊಂಡ ಕುದುರೆಗಳು
ಬಣಕಲ್‌ನಲ್‌ನಲ್ಲಿ ಕಾಣಿಸಿಕೊಂಡ ಕುದುರೆಗಳು   

ಮೂಡಿಗೆರೆ: ತಾಲ್ಲೂಕಿನ ಬಣಕಲ್‌ ಹೋಬಳಿಯ ಚೇಗು ಗ್ರಾಮದಲ್ಲಿ ಶನಿವಾರ ಮುಂಜಾನೆ35ಕ್ಕೂ ಅಧಿಕ ಕುದುರೆಗಳು ಕಾಣಿಸಿಕೊಂಡು ಆಶ್ಚರ್ಯ ಮೂಡಿಸಿವೆ.

ರಾಷ್ಟ್ರೀಯ ಹೆದ್ದಾರಿ 234ರ ವಿಲ್ಲುಪುರಂ– ಮಂಗಳೂರು ರಸ್ತೆಯಲ್ಲಿರುವ ಚಾರ್ಮಾಡಿ ಘಾಟ್‌ ಸಮೀಪ ಕುದುರೆಗಳ ಗುಂಪು ಕಾಣಿಸಿಕೊಂಡಿದ್ದು, ಅವುಗಳನ್ನು ಶುಕ್ರವಾರ ತಡರಾತ್ರಿ ಯಾರೋ ತಂದು ಗ್ರಾಮಕ್ಕೆ ಬಿಟ್ಟಿರಬಹುದು ಎಂದು ಶಂಕಿಸಲಾಗಿದೆ.

‘ಹಾಸನ ಪಟ್ಟಣದಲ್ಲಿ ಕುದುರೆಗಳ ಹಾವಳಿ ಹೆಚ್ಚಾಗಿರುವ ಕುರಿತು, ಕೆಲವು ದಿನಗಳ ಹಿಂದೆ ವರದಿಗಳು ಪ್ರಕಟವಾಗಿದ್ದು, ಅಲ್ಲಿಂದಲೇ ತಂದು ಬಿಟ್ಟಿರಬಹುದು ಅಥವಾ ಕುದುರೆಗಳನ್ನು ಕರಾವಳಿ ಪ್ರದೇಶಕ್ಕೆ ಅಕ್ರಮವಾಗಿ ಸಾಗಿಸುವ ವೇಳೆ, ಕೊಟ್ಟಿಗೆಹಾರದಲ್ಲಿರುವ‌ ಸಿಸಿ ಕ್ಯಾಮೆರದ ಕಣ್ಗಾವಲಿಗೆ ಹೆದರಿ ಅವುಗಳನ್ನು ಬಿಟ್ಟು ಹೋಗಿರಬಹುದು’ ಎಂದು ಸ್ಥಳೀಯರು ಕುದುರೆಗಳ ಬಗ್ಗೆ ಚರ್ಚಿಸುತ್ತಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.