ADVERTISEMENT

ಮಂಗಳೂರು ವಿ.ವಿ ಕಾಲೇಜಿಗೆ ಪಾರಂಪರಿಕ ಸಂಸ್ಥೆ ಸ್ಥಾನಮಾನ

​ಪ್ರಜಾವಾಣಿ ವಾರ್ತೆ
Published 5 ಜುಲೈ 2015, 19:30 IST
Last Updated 5 ಜುಲೈ 2015, 19:30 IST

ನವದೆಹಲಿ (ಪಿಟಿಐ): ಮಂಗಳೂರಿನ ವಿಶ್ವವಿದ್ಯಾಲಯ ಕಾಲೇಜು ಸೇರಿದಂತೆ ನೂರು ವರ್ಷ ಗಳಿಗಿಂತ ಹಳೆಯದಾದ  ದೇಶದ 19 ಕಾಲೇಜುಗಳಿಗೆ ವಿಶ್ವವಿದ್ಯಾಲಯ ಅನು ದಾನ ಆಯೋಗ (ಯುಜಿಸಿ) ಪಾರಂಪರಿಕ ಸ್ಥಾನಮಾನ ನೀಡಿದೆ.

ಈ ಕಾಲೇಜುಗಳನ್ನು ಅಭಿವೃದ್ಧಿಪಡಿಸಲು ಮತ್ತು ಮೇಲ್ದರ್ಜೆಗೇರಿಸಲು  ವಿಶೇಷ ಹಣಕಾಸು ನೆರವು ನೀಡಲು ಯುಜಿಸಿ ಒಪ್ಪಿಗೆ ನೀಡಿದೆ.
‘ಪಾರಂಪರಿಕ ಕಾಲೇಜು ಯೋಜನೆ’ ಅಡಿ ಪಾರಂಪರಿಕ ಸ್ಥಾನ ನೀಡಲು ದೇಶದ ಕಾಲೇಜುಗಳಿಂದ ಯುಜಿಸಿ ಪ್ರಸ್ತಾವಗಳನ್ನು ಆಹ್ವಾನಿಸಿತ್ತು. ಸುಮಾರು 60 ಅರ್ಜಿಗಳು ಈ ಸಂಬಂಧ ಸಲ್ಲಿಕೆಯಾಗಿದ್ದವು. 

‘ಆಯ್ಕೆ ಸಮಿತಿಗೆ  60 ಕಾಲೇಜುಗಳು ಅರ್ಜಿ ಸಲ್ಲಿಸಿದ್ದವು.  ಆಯ್ಕೆಯಾಗಿರುವ 19 ಕಾಲೇಜುಗಳಿಗೆ ನೀಡಲಾಗುವ ಹಣವನ್ನು ಕ್ಯಾಂಪಸ್‌ ಸಂರಕ್ಷಣಾ ಕಾರ್ಯಗಳಿಗೆ ಬಳಸಬಹುದು ಮತ್ತು ಪಾರಂಪರಿಕ ವಿಷಯಗಳಿಗೆ ಸಂಬಂಧಿ ಸಿದ ವಿಶೇಷ ಕೋರ್ಸ್‌ಗಳ ಆರಂಭಕ್ಕೆ ಉಪಯೋಗಿಸಬಹುದು’ ಎಂದು ಯುಜಿಸಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಗುವಾಹಟಿಯ ಕಾಟನ್ ಕಾಲೇಜಿಗೆ ಅತಿ ಹೆಚ್ಚು ₨4.35 ಕೋಟಿ ಅನುದಾನ ದೊರೆಯಲಿದೆ. ಕಾಲೇಜಿನ ಪಾರಂಪರಿಕ ಕಟ್ಟಡವನ್ನು ಸಂರಕ್ಷಿಸಲೂ ಈ ಹಣವನ್ನು ಬಳಸಬಹುದಾಗಿದೆ.

ರವೀಂದ್ರ ಕಲಾಭವನಕ್ಕೆ ₨1.83 ಕೋಟಿ: ಮಂಗಳೂರಿನ ವಿಶ್ವವಿದ್ಯಾಲಯ ಕಾಲೇಜಿಗೆ ಯುಜಿಸಿ   ₨ 1.83 ಕೋಟಿ ನೀಡಲಿದೆ. ಈ ಹಣವನ್ನು ಕಾಲೇಜಿನ ರವೀಂದ್ರ ಕಲಾಭವನದ ನವೀಕರಣಕ್ಕೆ ಬಳಸಬಹುದಾಗಿದೆ. ಸಿಗದ ಮಾನ್ಯತೆ: ಮಂಗಳೂರಿನ ಸೇಂಟ್‌ ಅಲೋಷಿಯಸ್‌ ಕಾಲೇಜು ಹಾಗೂ ಬೆಂಗಳೂರಿನ ಸೇಂಟ್‌ ಜೋಸೆಫ್‌ ಕಾಲೇಜು ಸಹ ಪಾರಂಪರಿಕ ಸ್ಥಾನ ಪಡೆಯಲು ಅರ್ಜಿ ಸಲ್ಲಿಸಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.