ADVERTISEMENT

ಮುಂದಿನ ತಿಂಗಳಿನಿಂದ ಸಕ್ಕರೆ ವಿತರಣೆ: ಆಹಾರ ಸಚಿವ

​ಪ್ರಜಾವಾಣಿ ವಾರ್ತೆ
Published 2 ಮೇ 2016, 19:54 IST
Last Updated 2 ಮೇ 2016, 19:54 IST

ಚಿಕ್ಕಮಗಳೂರು: ‘ದರ ಎಷ್ಟೆ ಆಗಲಿ ಸಕ್ಕರೆ ಖರೀದಿಸಿ ಮುಂದಿನ ತಿಂಗಳು ಪಡಿತರ ಆಹಾರ ಧಾನ್ಯದೊಂದಿಗೆ ನೀಡಲಾಗುವುದು’ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದರು.

ಬರ ಪರಿಸ್ಥಿತಿ ಅವಲೋಕಿಸಲು ಸೋಮವಾರ ಜಿಲ್ಲೆಗೆ ಸಚಿವ ಸಂಪುಟದ ಉಪ ಸಮಿತಿ ಸದಸ್ಯರ ತಂಡದಲ್ಲಿ ಬಂದಿದ್ದ ಅವರು, ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಸಕ್ಕರೆ ಬೆಲೆ ಏಕಾಏಕಿ ಹೆಚ್ಚಳಗೊಂಡಿದ್ದರಿಂದ ಸಕ್ಕರೆ ವಿತರಿಸಲು ಸಾಧ್ಯವಾಗಲಿಲ್ಲ. ಮುಂದಿನ ತಿಂಗಳು ಸಕ್ಕರೆ ವಿತರಣೆ ಆಗಲಿದೆ. ಸಕ್ಕರೆ ಬೆಲೆ ಪ್ರತಿ ಕೆ.ಜಿ.ಗೆ ₹40ಕ್ಕೆ ಏರಿಕೆಯಾಗಿದ್ದರಿಂದ ಖರೀದಿಸಲು ಸಾಧ್ಯವಾಗಲಿಲ್ಲ.

ಮುಕ್ತ ಮಾರುಕಟ್ಟೆಯಲ್ಲಿ ಸಕ್ಕರೆ ಖರೀದಿಸಲಾಗುವುದು. ₹32 ದರದಲ್ಲಿ ಸಕ್ಕರೆ ಖರೀದಿಸಿದರೆ ನಷ್ಟ ಉಂಟಾಗುವುದಿಲ್ಲ. ಈ ಬೆಲೆಗಿಂತ ಅಧಿಕವಾದರೆ ಸರ್ಕಾರಕ್ಕೆ ಹೊರೆಯಾಗಲಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT