ADVERTISEMENT

ಲಲಿತಕಲಾ ಅಕಾಡೆಮಿ ಪ್ರಶಸ್ತಿ ಪ್ರಕಟ

ಗುಜ್ಜಾರಪ್ಪ, ಎಂ.ಸಿ. ಚೆಟ್ಟಿ, ಬಾಗೋಡಿಗೆ ಗೌರವ ಪುರಸ್ಕಾರ

​ಪ್ರಜಾವಾಣಿ ವಾರ್ತೆ
Published 28 ಜೂನ್ 2017, 20:01 IST
Last Updated 28 ಜೂನ್ 2017, 20:01 IST
ಗುಜ್ಜಾರಪ್ಪ
ಗುಜ್ಜಾರಪ್ಪ   

ಬೆಂಗಳೂರು: ಹಿರಿಯ ಕಲಾವಿದರಾದ ಬೆಂಗಳೂರಿನ ಬಿ.ಜಿ. ಗುಜ್ಜಾರಪ್ಪ, ಹುಬ್ಬಳ್ಳಿಯ ಎಂ.ಸಿ. ಚೆಟ್ಟಿ ಹಾಗೂ ಕಲಬುರ್ಗಿಯ ವಿಜಯ ಬಾಗೋಡಿ ಅವರು ಕರ್ನಾಟಕ ಲಲಿತಕಲಾ ಅಕಾ ಡೆಮಿಯ 2017ನೇ ಸಾಲಿನ ಗೌರವ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಪ್ರಶಸ್ತಿಯು ತಲಾ ₹ 50,000 ನಗದು  ಒಳಗೊಂಡಿದೆ.

ಕಲಾ ಬಹುಮಾನ: 46ನೇ ವಾರ್ಷಿಕ ಕಲಾ ಪ್ರದರ್ಶನ ಹಾಗೂ ಬಹುಮಾನಕ್ಕೆ 10 ಕಲಾವಿದರು ಆಯ್ಕೆಯಾಗಿದ್ದಾರೆ. ಈ ಬಹುಮಾನ ತಲಾ ₹ 25,000 ನಗದು ಮತ್ತು ಫಲಕವನ್ನು  ಒಳಗೊಂಡಿದೆ.

ADVERTISEMENT

ಆಯ್ಕೆಯಾದವರು: ಪ್ರಕಾಶ್ ಗಡ್ಕರ್ (ಕಲಬುರ್ಗಿ),  ಚಂದ್ರಕಾಂತ ಸರೋದೆ (ಇಳಕಲ್), ಮಹ್ಮದ ಇಸ್ಹಾಕ ಗುಲಾಬಶಾ ಮಕಾನದಾರ(ಬೆಳಗಾವಿ), ಜಿ.ಆರ್. ಮಲ್ಲಾಪೂರ(ಹುಬ್ಬಳ್ಳಿ), ಎನ್‌. ಪಾಲಯ್ಯ(ಚಿತ್ರದುರ್ಗ),  ನರಸಿಂಹ ಗಂಟಿ (ಯಾದಗಿರಿ),  ಅಶೋಕ ಎಸ್. ಶಟಗಾರ (ಕಲಬುರಗಿ), ಎಂ.ಎಚ್. ಜಯಪ್ರಕಾಶ್ (ಚಿಕ್ಕಮಗಳೂರು)   ಎನ್‌. ಪೂರ್ಣಿಮಾ (ಮಂಡ್ಯ)  ಮತ್ತು  ನಿಹಾಲ್ ವಿಕ್ರಂ ರಾಜು(ಬಳ್ಳಾರಿ).

ಸುವರ್ಣ ಸಂಭ್ರಮ ಕಲಾ ಪುರಸ್ಕಾರ:
2017-18ನೇ ಸಾಲಿನ ಸುವರ್ಣ ಸಂಭ್ರಮ ಕಲಾ ಪುರಸ್ಕಾರ ವಿಶೇಷ ಬಹು ಮಾನಕ್ಕೆ  10  ಕಲಾವಿದರು ಆಯ್ಕೆಯಾಗಿ ದ್ದಾರೆ. ಈ ಬಹುಮಾನ ತಲಾ ₹ 20,000 ನಗದು ಮತ್ತು ಫಲಕ ಒಳಗೊಂಡಿದೆ.

ಆಯ್ಕೆಯಾದವರು: ಡಿ.ಕೆ. ರಂಗನಾಥ (ಮಹಾಲಿಂಗಪುರ), ಎಸ್. ವಿರೂಪಾಕ್ಷ (ಚಾಮರಾಜನಗರ),  ಎಚ್‌.ಪಿ. ಶಾಂತಲಾ (ಬೆಂಗಳೂರು),  ಗಂಗಾಧರ ಈ. ಬಂಡಾನವರ(ಕೊಪ್ಪಳ),  ವೀರೇಶ ಎಂ. ರುದ್ರಸ್ವಾಮಿ (ಬಾಗಲಕೋಟೆ),  ಸುಭಾಷ ಕಮ್ಮಾರ(ಬೆಳಗಾವಿ), ರಾಮ ಲಿಂಗ ಬೆಳಕೋಟೆ (ಕಲಬುರ್ಗಿ),  ವೀರಣ್ಣ ಕರಡಿ (ಹುಣಸೂರು), ಕೆ.ಎಸ್. ಪರಮೇಶ್ವರ (ಮೈಸೂರು) ಮತ್ತು ಎಚ್. ಸತೀಶ್(ಬೆಂಗಳೂರು).

ಪುಸ್ತಕ ಬಹುಮಾನ: 2016ನೇ ಸಾಲಿನ ಪುಸ್ತಕ ಬಹುಮಾನಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರೊ. ಎಸ್‌.ಸಿ. ಪಾಟೀಲ ಅವರ ‘ಕಲ್ಯಾಣ ಕರ್ನಾಟಕದ ಚಿತ್ರಕಲಾ ಪಥ’ ಹಾಗೂ 2017ನೇ ಸಾಲಿನ ಬಹುಮಾನಕ್ಕೆ ಕಲಬುರ್ಗಿಯ  ಮಲ್ಲಿಕಾರ್ಜುನ ಸಿ. ಬಾಗೋಡಿ ಅವರ ‘ದೃಶ್ಯ ಸಂಕುಲ’ ಪುಸ್ತಕಗಳನ್ನು ಆಯ್ಕೆ ಮಾಡಲಾಗಿದೆ. ಬಹುಮಾನ ತಲಾ ₹25,000 ನಗದು ಮತ್ತು ಫಲಕ ಒಳಗೊಂಡಿದೆ.

ವಾರ್ಷಿಕ ಕಲಾ ಪ್ರದರ್ಶನದಲ್ಲಿ ಈ ಎಲ್ಲ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು ಎಂದು ಅಕಾಡೆಮಿ ಅಧ್ಯಕ್ಷ ಎಂ.ಎಸ್‌. ಮೂರ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.