ADVERTISEMENT

ವಿದೇಶಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ಯುವಕ ಪೊಲೀಸ್ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2017, 13:28 IST
Last Updated 23 ಸೆಪ್ಟೆಂಬರ್ 2017, 13:28 IST
– ಸಾಂದರ್ಭಿಕ ಚಿತ್ರ
– ಸಾಂದರ್ಭಿಕ ಚಿತ್ರ   

ಮಂಗಳೂರು: ನಗರದ ಕಾಲೇಜು ಒಂದರಲ್ಲಿ ವ್ಯಾಸಂಗ ಮಾಡುತ್ತಿರುವ ಜರ್ಮನಿಯ ವಿದ್ಯಾರ್ಥಿನಿ ಮೇಲೆ ದೇರಳಕಟ್ಟೆಯ ಪನ್ನೀರು ಎಂಬಲ್ಲಿ ಶನಿವಾರ ಸಂಜೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇಲೆ‌ ಯುವಕನೊಬ್ಬನನ್ನು ಸಾರ್ವಜನಿಕರೇ ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

ಶನಿವಾರ ಸಂಜೆ ತರಗತಿಗಳನ್ನು ಮುಗಿಸಿಕೊಂಡು ಯುವತಿ ನಡೆದು ಹೋಗುತ್ತಿದ್ದರು. ಆಕೆಯನ್ನು ಹಿಂಬಾಲಿಸಿ ಬಂದ ಯುವಕ ಪನ್ನೀರು ಜಂಕ್ಷನ್ ಬಳಿ ಎಳೆದಾಡಿದ್ದಾನೆ.

ಯುವತಿ ಜೋರಾಗಿ ಕೂಗುತ್ತಿದ್ದಂತೆ ಸ್ಥಳೀಯರು ಬೆನ್ನಟ್ಟಿ ಆರೋಪಿ ಯುವಕನನ್ನು ಹಿಡಿದಿದ್ದಾರೆ. ಬಳಿಕ ಉಳ್ಳಾಲ ಠಾಣೆ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.