ADVERTISEMENT

ವಿಶ್ವೇಶ್ವರನ್, ನಿರೋಡಿ, ರಾಧಾಕೃಷ್ಣಗೆ ಗೌರವ ಡಾಕ್ಟರೇಟ್

30ರಂದು ಸಂಗೀತ ವಿವಿ ಘಟಿಕೋತ್ಸವ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2015, 20:00 IST
Last Updated 27 ನವೆಂಬರ್ 2015, 20:00 IST

ಮೈಸೂರು: ಇಲ್ಲಿನ ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್‌ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿವಿಯ ಮೊದಲ ಘಟಿಕೋತ್ಸವ ನ. 30ರಂದು ನಡೆಯಲಿದೆ.

ಅಂದು ಸಂಜೆ 4 ಗಂಟೆಗೆ ಮೈಸೂರು ವಿವಿಯ ಕ್ರಾಫರ್ಡ್‌ ಹಾಲ್‌ನಲ್ಲಿ ನಡೆಯುವ ಸಮಾರಂಭದಲ್ಲಿ ಕರ್ನಾಟಕ ಸಂಗೀತ ವೈಣಿಕ ಪ್ರೊ.ರಾ. ವಿಶ್ವೇಶ್ವರನ್, ಹಿಂದೂಸ್ತಾನಿ ಗಾಯಕ ಪಂ.ಇಂದೂಧರ ನಿರೋಡಿ ಹಾಗೂ ಭರತನಾಟ್ಯ ಕಲಾವಿದ ಬೆಂಗಳೂರಿನ ನಾಟ್ಯಾಚಾರ್ಯ ಸಿ. ರಾಧಾಕೃಷ್ಣ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುತ್ತದೆ.

ಅಲ್ಲದೆ, ಮೂವರು ಪದವೀಧರರಿಗೆ ಹಾಗೂ 32 ಸ್ನಾತಕೋತ್ತರ ಪದವೀಧರರಿಗೆ ಪದವಿ ಪ್ರದಾನ ನಡೆಯಲಿದೆ. ಭರತನಾಟ್ಯ ಹಾಗೂ ಚಲನಚಿತ್ರ ಕಲಾವಿದೆ  ಡಾ.ವೈಜಯಂತಿ ಮಾಲಾ ಬಾಲಿ ಅವರು ಘಟಿಕೋತ್ಸವ ಭಾಷಣ ಮಾಡುವರು.

ಉನ್ನತ ಶಿಕ್ಷಣ ಸಚಿವ ಟಿ.ಬಿ. ಜಯಚಂದ್ರ ಹಾಜರಿರುವರು. ರಾಜ್ಯಪಾಲ ವಜುಭಾಯಿ ವಾಲಾ ಅಧ್ಯಕ್ಷತೆ ವಹಿಸುವರು ಎಂದು ವಿವಿ ಕುಲಪತಿ ಡಾ.ಸರ್ವಮಂಗಳಾ ಶಂಕರ್ ಶುಕ್ರವಾರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.