ADVERTISEMENT

ಅಮೆರಿಕದ ಯುದ್ಧ ನೀತಿಗೆ ಖಂಡನೆ

ಐಎಎನ್ಎಸ್
Published 20 ಮಾರ್ಚ್ 2017, 19:30 IST
Last Updated 20 ಮಾರ್ಚ್ 2017, 19:30 IST
ಪ್ಯೊಂಗ್ಯಂಗ್‌: ಭಯೋತ್ಪಾದನೆ ನಿಗ್ರಹಕ್ಕಾಗಿ ಅಮೆರಿಕ ನಡೆಸುತ್ತಿರುವ ಯುದ್ಧವನ್ನು ಉತ್ತರ ಕೊರಿಯಾದ ಕೇಂದ್ರ ಸುದ್ದಿ ಸಂಸ್ಥೆ (ಕೆಸಿಎನ್‌ಎ)  ಖಂಡಿಸಿದೆ. 
 
‘ಭಯೋತ್ಪಾದನೆ ನಿಗ್ರಹದ ನೆಪದಲ್ಲಿ ಅಮೆರಿಕ ಇನ್ನೊಂದು ರಾಷ್ಟ್ರದ ಸಾರ್ವಭೌಮತ್ವದಲ್ಲಿ ಮೂಗು ತೂರಿಸಲು ಪ್ರಯತ್ನಿಸುತ್ತಿದೆ’ ಎಂದಿದೆ. ತನ್ನ ವಿರೋಧಿ ದೇಶಗಳ ಮೇಲೆ ಆಕ್ರಮಣ ಮಾಡುವ ಹಾಗೂ ಸಾಮ್ರಾಜ್ಯಶಾಹಿ ನೀತಿಯಿಂದ ಜಗತ್ತನ್ನು ಹಿಡಿತದಲ್ಲಿಟ್ಟುಕೊಳ್ಳುವ ಸಲುವಾಗಿ ಅಮೆರಿಕ ಈ ಅಸ್ತ್ರ ಬಳಸುತ್ತಿದೆ ಎಂದು ಆರೋಪಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.