ADVERTISEMENT

ಅಮೆರಿಕ ಪ್ರವೇಶ ಇನ್ನೂ ಕಠಿಣ?

ಏಜೆನ್ಸೀಸ್
Published 24 ಸೆಪ್ಟೆಂಬರ್ 2017, 19:35 IST
Last Updated 24 ಸೆಪ್ಟೆಂಬರ್ 2017, 19:35 IST

ವಾಷಿಂಗ್ಟನ್‌: ಆರು ಮುಸ್ಲಿಂ ರಾಷ್ಟ್ರಗಳ ನಾಗರಿಕರಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರ ಆಡಳಿತವು ವಿಧಿಸಿದ್ದ ಪ್ರವೇಶ ನಿರ್ಬಂಧವು ಭಾನುವಾರ ಮಧ್ಯರಾತ್ರಿಗೆ (ಭಾರತದಲ್ಲಿ ಸೋಮವಾರ) ಕೊನೆಗೊಳ್ಳಲಿದ್ದು, ಮುಂದಿನ ಹಂತದಲ್ಲಿ ಇದು ಇನ್ನಷ್ಟು ಕಠಿಣಗೊಳ್ಳುವ ಸಾಧ್ಯತೆ ಇದೆ.

‘ನಿರ್ದಿಷ್ಟ ದೇಶಗಳು ತಮ್ಮ ನಾಗರಿಕರ ಕುರಿತು ಅಮೆರಿಕದ ಜೊತೆಗೆ ಹೆಚ್ಚಿನ ಮಾಹಿತಿ ಹಂಚಿಕೊಳ್ಳಲು ನಿರಾಕರಿಸುತ್ತವೆ ಮತ್ತು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದಿರುವುದರಿಂದ ಇನ್ನಷ್ಟು ನಿರ್ಬಂಧ ಹೇರಬೇಕೆಂದು ಟ್ರಂಪ್‌ ಅವರಿಗೆ ಶಿಫಾರಸು ಮಾಡಲಾಗಿದೆ’ ಎಂದು ಆಂತರಿಕ ಭದ್ರತಾ ಇಲಾಖೆಯ ಕಾರ್ಯದರ್ಶಿ ಎಲೈನ್‌ ಡ್ಯೂಕ್‌ ಅವರ ಸಲಹೆಗಾರರಾದ ಮೈಲ್ಸ್‌ ಟೇಲರ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.