ADVERTISEMENT

ಆಫ್ಘನ್: ಆತ್ಮಹತ್ಯಾ ದಾಳಿಗೆ 33 ಬಲಿ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2015, 12:00 IST
Last Updated 18 ಏಪ್ರಿಲ್ 2015, 12:00 IST
ದಾಳಿ ನಡೆದ ಸ್ಥಳ  –ಎಎಫ್‌ಪಿ ಚಿತ್ರ
ದಾಳಿ ನಡೆದ ಸ್ಥಳ –ಎಎಫ್‌ಪಿ ಚಿತ್ರ   

ಜಲಾಲಾಬಾದ್‌, ಆಫ್ಘನ್‌ (ಎಎಫ್‌ಪಿ): ಈಶಾನ್ಯ ಆಫ್ಘಾನಿಸ್ತಾನದ ಜಲಾಲಾಬಾದ್ ನಗರ ಬ್ಯಾಂಕ್‌ವೊಂದರ ಹೊರಗೆ ಶನಿವಾರ ಆತ್ಮಹತ್ಯಾ ದಾಳಿ ನಡೆದಿದೆ. ಭೀಕರ ದಾಳಿಯಲ್ಲಿ ಕನಿಷ್ಠ 33 ಜನರು ಸಾವನ್ಜಪ್ಪಿದ್ದು, 100ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ.

‘33 ಮೃತದೇಹಗಳನ್ನು ಹಾಗೂ 100 ಗಾಯಾಳುಗಳನ್ನು ಆಸ್ಪತ್ರೆಗೆ ತರಲಾಗಿದೆ’ ಎಂದು ಆಸ್ಪತ್ರೆಯ ಮುಖ್ಯಸ್ಥ ಡಾ. ನಜೀಬುಲ್ಲಾ ಕಮವಾಲ್ ಅವರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

‘ಸರ್ಕಾರಿ ನೌಕರರು ಹಾಗು ನಾಗರಿಕರು ತಮ್ಮ ತಿಂಗಳ ಸಂಬಳವನ್ನು ಪಡೆಯುತ್ತಿದ್ದ ವೇಳೆ ಬ್ಯಾಂಕ್‌ ಹೊರಗೆ ಸ್ಫೋಟ ನಡೆದಿದೆ’ ಎಂದು ಪ್ರಾದೇಶಿಕ ಸರ್ಕಾರದ ವಕ್ತಾರಾಗಿರುವ ಅಹ್ಮದ್ ಜಿಯಾ ಅಬ್ದುಲ್ದಾಜೈ ಖಚಿತಪಡಿಸಿದ್ದಾರೆ.‌

ADVERTISEMENT

ದಾಳಿ ಘಟನೆಯನ್ನು ಆಫ್ಘಾನ್‌ ಅಧ್ಯಕ್ಷ ಅಶ್ರಫ್ ಗನಿ ಅವರು ತೀವ್ರವಾಗಿ ಖಂಡಿಸಿದ್ದಾರೆ.
‘ನಗರಗಳಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ನಡೆಸುವ ಉಗ್ರರ ದಾಳಿಗಳು ಹೇಡಿತನ ಕೃತ್ಯ’ ಎಂದು ಅವರು ಟೀಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.