ADVERTISEMENT

ಉತ್ತರ ಕೊರಿಯಾ ರಾಯಭಾರಿಗೆ ಪ್ರತಿಭಟನೆ ದಾಖಲಿಸಿದ ಮಲೇಷ್ಯಾ

ಏಜೆನ್ಸೀಸ್
Published 20 ಫೆಬ್ರುವರಿ 2017, 19:30 IST
Last Updated 20 ಫೆಬ್ರುವರಿ 2017, 19:30 IST

ಕ್ವಾಲಾಲಂಪುರ: ಉತ್ತರ ಕೊರಿಯಾದ  ಸರ್ವಾಧಿಕಾರಿ  ಕಿಮ್‌ ಜಾಂಗ್‌ ಉನ್‌ ಅವರ ಮಲಸಹೋದರನ ಹತ್ಯೆ ಪ್ರಕರಣವು ಮಲೇಷ್ಯಾ ಮತ್ತು ಉತ್ತರ ಕೊರಿಯಾ ನಡುವಣ ರಾಜತಾಂತ್ರಿಕ ಸಂಘರ್ಷವನ್ನು ಮತ್ತಷ್ಟು ಹೆಚ್ಚಿಸಿದೆ. ಉತ್ತರ ಕೊರಿಯಾದ ರಾಯಭಾರಿಯನ್ನು ಸೋಮವಾರ ಕರೆಸಿ ಕೊಂಡಿರುವ ಮಲೇಷ್ಯಾ ತನ್ನ ಪ್ರತಿಭಟನೆ ದಾಖಲಿಸಿದೆ.

ಉತ್ತರ ಕೊರಿಯಾದಲ್ಲಿನ  ತನ್ನ ರಾಯಭಾರಿಯನ್ನು ವಾಪಸ್‌ ಕರೆಸಿ ಕೊಂಡಿರುವ ಮಲೇಷ್ಯಾ ಆ ದೇಶದ ವಿರುದ್ಧ ತನ್ನ ಆಕ್ರೋಶ ವ್ಯಕ್ತಪಡಿಸಿದೆ.
‘ಮಲೇಷ್ಯಾದ ನೆಲದಲ್ಲಿ ನಿಗೂಢವಾಗಿ ಹತ್ಯೆ ನಡೆದಿದೆ. ಆದ್ದರಿಂದ ಅಲ್ಲಿನ ಸರ್ಕಾರವೇ ತನಿಖೆಯ ಜವಾಬ್ದಾರಿಯನ್ನು ಹೊತ್ತುಕೊಳ್ಳಬೇಕು. ಸಾವಿನ ಕಾರಣವನ್ನು ಪತ್ತೆ ಮಾಡಬೇಕು ’ ಎಂದು ಉತ್ತರ ಕೊರಿಯಾದ ವಿದೇಶಾಂಗ ಸಚಿವಾಲಯ ಹೇಳಿದೆ.

ಸಿ.ಸಿ.ಟಿ.ವಿಯಲ್ಲಿ ಹತ್ಯೆ ದೃಶ್ಯ?: ಕಿಮ್ ಜಾಂಗ್‌ ನಮ್‌ ಅವರನ್ನು ಹತ್ಯೆ ಮಾಡಲು  ಮಹಿಳೆಯೊಬ್ಬರನ್ನು ಕಳುಹಿಸಲಾಗಿತ್ತು ಎನ್ನಲಾಗಿರುವ ಅಂಶ ಸಿ.ಸಿ.ಟಿ.ವಿ ದೃಶ್ಯಾವಳಿಗಳಲ್ಲಿ ಸೆರೆಯಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.