ADVERTISEMENT

ಉದ್ಯಮಿ ಅದಾನಿಗೆ ಚೀನಾ ಸಾಲ?

ಪಿಟಿಐ
Published 22 ನವೆಂಬರ್ 2017, 19:30 IST
Last Updated 22 ನವೆಂಬರ್ 2017, 19:30 IST
ಗೌತಮ್ ಅದಾನಿ
ಗೌತಮ್ ಅದಾನಿ   

ಮೆಲ್ಬರ್ನ್‌: ₹1600 ಕೋಟಿ (16.5 ಬಿಲಿಯನ್ ಯುಎಸ್‌ಡಿ) ವೆಚ್ಚದ ವಿವಾದಾತ್ಮಕ ಕಾರ್ಮೈಕಲ್ ಕಲ್ಲಿದ್ದಲು ಗಣಿಗಾರಿಕೆ ಯೋಜನೆಗಾಗಿ 388 ಕಿ. ಮೀ ರೈಲ್ವೆ ಮಾರ್ಗ ನಿರ್ಮಿಸಲು ಗಣಿ ಉದ್ಯಮಿ ಅದಾನಿ ಅವರಿಗೆ ಚೀನಾ ಸಾಲ ನೀಡುವ ಸಾಧ್ಯತೆಯಿದೆ.

ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್‌ನ ಅಬ್ಬೋಟ್ ಪಾಯಿಂಟ್ ಹಾಗೂ ಗಲಿಲೀ ನಡುವಿನ ರೈಲ್ವೆ ಮಾರ್ಗಕ್ಕೆ ಚೀನಾದಿಂದ ಹಣಕಾಸು ನೆರವು ಪಡೆಯುವಲ್ಲಿ ಇಲ್ಲಿನ ಅದಾನಿ ಎಂಟರ್‌ಪ್ರೈಸಸ್ ಸಫಲವಾಗಿದೆ ಎಂದು ಎಬಿಸಿ ವರದಿ ಮಾಡಿದೆ. ಮೂಲಸೌಕರ್ಯಕ್ಕೆ ಸಾಲ ನೀಡುವ ನಾರ್ಥರ್ನ್ ಆಸ್ಟ್ರೇಲಿಯಾ ಇನ್‌ಫ್ರಾಸ್ಟ್ರಕ್ಚರ್ ಫೆಸಿಲಿಟಿಯ (ಎನ್‌ಎಐಎಫ್‌) ನೆರವು ಅದಾನಿ ಕಂಪೆನಿಗೆ ಇನ್ನು ಅಗತ್ಯವಿಲ್ಲ ಎಂದೂ ಪ್ರಕಟಿಸಿದೆ.

ಅದಾನಿ ಕಂಪೆನಿಯ ಕಲ್ಲಿದ್ದಲು ಗಣಿ ಯೋಜನೆಯು ಪರಿಸರ ಇಲಾಖೆಯ ಒಪ್ಪಿಗೆ ಪಡೆದಿದೆ ಎಂದು ಕಳೆದ ತಿಂಗಳು ಆಸ್ಟ್ರೇಲಿಯಾ ಸರ್ಕಾರದ ಸಚಿವರೊಬ್ಬರು ಚೀನಾ ಸರ್ಕಾರಕ್ಕೆ ಪತ್ರ ಬರೆದು ಖಚಿತಪಡಿಸಿದ್ದರು.

ADVERTISEMENT

ಕ್ವೀನ್ಸ್‌ಲ್ಯಾಂಡ್‌ನಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ 10 ಸಾವಿರ ಉದ್ಯೋಗ ಸೃಷ್ಟಿಯಾಗಲಿವೆ ಎಂದು ಕಂಪೆನಿ ಹೇಳಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.