ವಾಷಿಂಗ್ಟನ್ (ಪಿಟಿಐ): ‘ಗಣಿತ ಹಾಗೂ ತಂತ್ರಜ್ಞಾನ ವಿಷಯಗಳ ಕಲಿಕೆಯಲ್ಲಿ ಭಾರತ ಮತ್ತು ಚೀನಾದ ಅಸಂಖ್ಯಾತ ವಿದ್ಯಾರ್ಥಿಗಳು ಅಮೆರಿಕನ್ನರನ್ನು ಮೀರಿಸುವ ರೀತಿಯಲ್ಲಿ ಪರಿಶ್ರಮ ಹಾಕುತ್ತಿದ್ದಾರೆ’ ಎಂದು ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಅವರು ತಮ್ಮ ದೇಶದ ಯುವ ಜನರಿಗೆ ಎಚ್ಚರಿಕೆ ನೀಡಿದರು.
‘ನಮ್ಮ ಹಿಂದಿನ ತಲೆಮಾರು ಆರ್ಥಿಕವಾಗಿ ಬಲಿಷ್ಠವಾಗಿತ್ತು. ಆಗ ನಮಗೆ ಎದುರಾಳಿ ಇರಲಿಲ್ಲ. ಆದರೆ ಈಗ ಬೀಜಿಂಗ್ನಿಂದ ಬೆಂಗಳೂರು, ಮಾಸ್ಕೊ ಹೀಗೆ ಎಲ್ಲ ಕಡೆ ಪೈಪೋಟಿ ಎದುರಾಗುತ್ತಿದೆ. ಈ ದೇಶಗಳಲ್ಲಿ ಶಿಕ್ಷಣಕ್ಕೆ ಎಲ್ಲಿಲ್ಲದ ಒತ್ತು ಸಿಗುತ್ತಿದೆ. ಅವುಗಳ ಬಲವಾದ ಪೈಪೋಟಿಯನ್ನು ನಾವು ಎದುರಿಸಬೇಕಾಗಿದೆ’ ಎಂದು ಹೇಳಿದರು.
‘ಬ್ರೂಕ್ಲಿನ್ನ ಪ್ರೌಢಶಾಲೆಯೊಂದರಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಬೆಳವಣಿಗೆಯಿಂದ ಯಾರಿಗೆ ಬೇಕಾದರೂ ಉದ್ಯೋಗಾವಕಾಶ ಸಿಗಬಹುದು’ ಎಂದು ಎಚ್ಚರಿಕೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.