ADVERTISEMENT

‘ಕಸಕ್ಕಿಂತ ಕಡೆಯಾದ ಜನರಲ್‌ಗಳು’

ಪಿಟಿಐ
Published 8 ಸೆಪ್ಟೆಂಬರ್ 2016, 19:30 IST
Last Updated 8 ಸೆಪ್ಟೆಂಬರ್ 2016, 19:30 IST

ವಾಷಿಂಗ್ಟನ್ : ಅಧ್ಯಕ್ಷ ಬರಾಕ್ ಒಬಾಮ ಅವರ ಆಡಳಿತಾವಧಿಯಲ್ಲಿ ಅಮೆರಿಕದ ಜನರಲ್‌ಗಳು ‘ಕಸಕ್ಕಿಂತ ಕಡೆ’ಯಾಗಿದ್ದಾರೆ ಎಂದು ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್‌ ಟೀಕಿಸಿದ್ದಾರೆ. ಇದರೊಂದಿಗೆ ಟ್ರಂಪ್ ವಿವಾದಿತ ಹೇಳಿಕೆಗಳ ಸರಣಿ ಮುಂದುವರಿದಂತಾಗಿದೆ.

‘ಒಬಾಮ ಮತ್ತು ಹಿಲರಿ ಕ್ಲಿಂಟನ್ ನಾಯಕತ್ವದಲ್ಲಿ ಜನರಲ್‌ಗಳು ಕಸಕ್ಕಿಂತ ಕಡೆಯಾಗಿದ್ದಾರೆ. ಇದರಿಂದ ದೇಶ ಮುಜುಗರಕ್ಕೀಡಾಗುವಂತಾಗಿದೆ’ಎಂದು ಟ್ರಂಪ್ ದೂರಿದ್ದಾರೆ. ಅಧ್ಯಕ್ಷನಾಗಿ ಆಯ್ಕೆಯಾದಲ್ಲಿ ಕೆಲ ಹಿರಿಯ ಸೇನಾಧಿಕಾರಿಗಳನ್ನು ಬದಲಾಯಿಸುವುದಾಗಿಯೂ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.