ADVERTISEMENT

ಗೂಗಲ್‌ ಸೇವೆ ಮೇಲ್ದರ್ಜೆಗೆ ಭೂಮಿ ವೀಕ್ಷಣೆ ಇನ್ನಷ್ಟು ಸುಲಭ

​ಪ್ರಜಾವಾಣಿ ವಾರ್ತೆ
Published 30 ಜೂನ್ 2016, 19:30 IST
Last Updated 30 ಜೂನ್ 2016, 19:30 IST

ಸ್ಯಾನ್‌ ಫ್ರಾನ್ಸಿಸ್ಕೊ (ಎಎಫ್‌ಪಿ): ಗೂಗಲ್‌ನ ಉಚಿತ ಆನ್‌ಲೈನ್‌ ನಕಾಶೆ ಸೇವೆಯನ್ನು ಈಗ ಮೇಲ್ದರ್ಜೆಗೆ ಏರಿಸಲಾಗಿದೆ.
ಇದರಿಂದಾಗಿ ಭೂಮಿಯ ವೀಕ್ಷಣೆ ಮತ್ತಷ್ಟು ಸುಲಭವಾಗಲಿದೆ. ಇದಕ್ಕಾಗಿಯೇ ಅಮೆರಿಕದ ‘ಲ್ಯಾಂಡ್‌ಸ್ಯಾಟ್‌ 8’ ಉಪಗ್ರಹದಿಂದ ತೆಗೆದಿರುವ ಚಿತ್ರಗಳನ್ನು ಬಳಸಲಾಗುತ್ತಿದೆ.

‘ಕ್ಲೌಡ್‌ ಫ್ರಿ ಮೊಸಾಯಿಕ್’ ಹೆಸರಿನಲ್ಲಿ ಭೂಮಿಯ ವಿವರಗಳನ್ನು ಪರಿಚಯಿಸಿದ್ದ ಗೂಗಲ್‌, ಸೋಮವಾರದಿಂದ ಹೊಸ ತಂತ್ರಜ್ಞಾನವನ್ನು ಅಳವಡಿಸಿದೆ. ಉತ್ತಮ ಸೇವೆ ಒದಗಿಸುವ ನಿಟ್ಟಿನಲ್ಲಿ ಗೂಗಲ್‌, ನಾಸಾ ಮತ್ತು ಅಮೆರಿಕದ ಭೌಗೋಳಿಕ ಸಮೀಕ್ಷಾ ಸಂಸ್ಥೆ ಜತೆ ಒಪ್ಪಂದ ಮಾಡಿಕೊಂಡಿದೆ.

ಈ ಮೊದಲು ಗೂಗಲ್‌ ‘ಲ್ಯಾಂಡ್‌ಸ್ಯಾಟ್‌ 7’ ಉಪಗ್ರಹದಿಂದ ದೊರೆತಿದ್ದ ಚಿತ್ರಗಳನ್ನು ಬಳಸಿಕೊಂಡಿತ್ತು. ಆದರೆ, ಇದರಿಂದ ಹಾರ್ಡ್‌ವೇರ್‌ನಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡಿತ್ತು. ‘ಲ್ಯಾಂಡ್‌ಸ್ಯಾಟ್‌ 8’ ಉಪಗ್ರಹದ ಚಿತ್ರಗಳು ಹೆಚ್ಚು ಸ್ಪಷ್ಟವಾಗಿವೆ ಎಂದು ಪ್ರೋಗ್ರಾಂ ಮ್ಯಾನೇಜರ್‌ ಕ್ರಿಸ್‌ ಹೆರ್‌ ವಿಗ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.