ADVERTISEMENT

ಟ್ರಂಪ್‌ಗೆ ಕೊಂಚ ಹಿನ್ನಡೆ

ಏಜೆನ್ಸೀಸ್
Published 20 ಜುಲೈ 2017, 19:30 IST
Last Updated 20 ಜುಲೈ 2017, 19:30 IST
ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್   

ವಾಷಿಂಗ್ಟನ್: ಪ್ರಯಾಣ ನಿರ್ಬಂಧ ಆದೇಶ ಹೊರಡಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಅಲ್ಪ ಹಿನ್ನಡೆಯಾಗಿದೆ. ಅಜ್ಜ–ಅಜ್ಜಿಯರು, ಮೊಮ್ಮಕ್ಕಳು ಹಾಗೂ ಅಮೆರಿಕದ ನಿವಾಸಿಗಳ ನಿಕಟ ಸಂಬಂಧಿಕರಿಗೆ ಈ ನಿಯಮಾವಳಿ ಅನ್ವಯವಾಗದು ಎಂದು ಸುಪ್ರೀಂಕೋರ್ಟ್ ಗುರುವಾರ ಹೇಳಿದೆ.

‘ನಿಕಟ ಸಂಬಂಧಿಗಳು’ ಯಾರು ಎಂಬ ಬಗ್ಗೆ ಅಮೆರಿಕ ಸರ್ಕಾರ ನಿಗದಿಪಡಿಸಿರುವ ಮಾನದಂಡಗಳು ಸಂಕುಚಿತವಾಗಿವೆ ಎಂಬ ಹವಾಯಿಯ ಫೆಡರಲ್ ನ್ಯಾಯಾಧೀಶರ ಅಭಿಪ್ರಾಯವನ್ನು ಸುಪ್ರೀಂಕೋರ್ಟ್ ಮಾನ್ಯ ಮಾಡಿದೆ. ಆದರೆ, ‘ಅಜ್ಜ–ಅಜ್ಜಿ, ಮೊಮ್ಮಕ್ಕಳು, ಅಳಿಯ, ಸೊಸೆ, ಚಿಕ್ಕಪ್ಪ, ಚಿಕ್ಕಮ್ಮ (ಆಂಟ್, ಅಂಕಲ್), ಸೋದರಳಿಯ, ಸೋದರ ಸಂಬಂಧಿಗಳು ಹಾಗೂ ಸೋದರರು ಈ ಮಾನದಂಡಕ್ಕೆ ಒಳಪಡಲಿದ್ದಾರೆ’ ಎಂದು ಫೆಡರಲ್ ಕೋರ್ಟ್ ನೀಡಿದ್ದ ವಿವರಣೆಯನ್ನು ಕೋರ್ಟ್ ಸಂಪೂರ್ಣ ಒಪ್ಪಿಲ್ಲ. ಆದೇಶದ ಕೆಲವು ಭಾಗಗಳಿಗೆ ತಡೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT