ADVERTISEMENT

ನನ್ನ ಮಕ್ಕಳು ಸಹ ಹೆದರಿದ್ದಾರೆ: ಬಿಸ್ವಾಲ್‌

ಪಿಟಿಐ
Published 18 ಜನವರಿ 2017, 19:30 IST
Last Updated 18 ಜನವರಿ 2017, 19:30 IST

ವಾಷಿಂಗ್ಟನ್‌ : ಅಮೆರಿಕ ಅಧ್ಯಕ್ಷೀಯ ಚುನಾವಣೆ ಬಳಿಕ ವಲಸಿಗರಲ್ಲಿ ಉಂಟಾಗಿದ್ದ  ಆತಂಕದ ಕುರಿತು ಮಾತನಾಡಿರುವ ಒಬಾಮ ಆಡಳಿತದ ಹಿರಿಯ ಭಾರತೀಯ ಅಮೆರಿಕನ್‌ ಅಧಿಕಾರಿ, ‘ನನ್ನ ಮನೆಯಲ್ಲಿಯೇ ಈ ಅನುಭವ ಆಗಿದೆ’ ಎಂದು ಹೇಳಿದ್ದಾರೆ.

‘ಡೊನಾಲ್ಡ್‌ ಟ್ರಂಪ್‌ ಅವರು ಅಮೆರಿಕ ಅಧ್ಯಕ್ಷರಾದ ನಂತರ ನಾವು ದೇಶ ಬಿಡಬೇಕೆ ?’ ಎಂದು ನನ್ನ ಮಕ್ಕಳು ಪ್ರಶ್ನಿಸಿದ್ದರು ಎಂದು ದಕ್ಷಿಣ ಮತ್ತು ಮಧ್ಯ ಪ್ರಾಚ್ಯದ ಸಹಾಯಕ ಕಾರ್ಯದರ್ಶಿ ನಿಶಾ ದೇಸಾಯಿ ಬಿಸ್ವಾಲ್‌ ಅವರು ತಮ್ಮ ಅನುಭವ ಹಂಚಿಕೊಂಡಿದ್ದಾರೆ.

‘ನನ್ನ ಮಕ್ಕಳು ಚುನಾವಣಾ ಪ್ರಚಾರವನ್ನು ಎಷ್ಟು ಸೂಕ್ಷ್ಮವಾಗಿ ಗಮನಿಸಿದ್ದರು ಎಂದರೆ, ಚುನಾವಣೆ ಬಳಿಕ ‘ನಾವು ವಲಸಿಗರಾಗಿರುವುದರಿಂದ, ದೇಶ ಬಿಡಬೇಕೆ’ ಎಂದು ಪ್ರಶ್ನಿಸಿದರು. ಈ ಪ್ರಶ್ನೆ ನನ್ನಲ್ಲಿ ಅಚ್ಚರಿ ಮೂಡಿಸಿತ್ತು’ ಎಂದಿದ್ದಾರೆ. ‘ಟ್ರಂಪ್‌ ಆಡಳಿತದ ಬಗ್ಗೆ ವಲಸಿಗರು ಮತ್ತು ಅಲ್ಪಸಂಖ್ಯಾತ ಸಮುದಾಯದಲ್ಲಿ ಸಾಕಷ್ಟು ಆತಂಕವಿದೆ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.