ADVERTISEMENT

ಪಾಕ್‌ನಲ್ಲಿ 130 ಉಗ್ರರ ಹತ್ಯೆ

ಪಿಟಿಐ
Published 19 ಫೆಬ್ರುವರಿ 2017, 19:30 IST
Last Updated 19 ಫೆಬ್ರುವರಿ 2017, 19:30 IST

ಲಾಹೋರ್: ದಕ್ಷಿಣ ಸಿಂಧ್ ಪ್ರಾಂತ್ಯದ ಸೂಫಿ ದರ್ಗಾದಲ್ಲಿ ಸಂಭವಿಸಿದ ಆತ್ಮಾಹುತಿ ಬಾಂಬ್ ಸ್ಫೋಟದ ಬಳಿಕ ಪಾಕಿಸ್ತಾನದಲ್ಲಿ 130 ಉಗ್ರರನ್ನು ಹತ್ಯೆ ಮಾಡಲಾಗಿದೆ.

ಪಂಜಾಬ್ ಪ್ರಾಂತ್ಯದಿಂದ 350 ಶಂಕಿತರನ್ನು ಬಂಧಿಸಲಾಗಿದೆ. ಬಂಧಿತರು ಆಫ್ಘಾನಿಸ್ತಾನದವರು ಇರಬಹುದು ಎಂದು ಪಂಜಾಬ್‌ನ ಪೊಲೀಸ್ ವಕ್ತಾರ ನಿಯಾಬ್ ಹೈದರ್ ತಿಳಿಸಿದ್ದಾರೆ. ಲಾಹೋರ್‌ನ ಮಾಲ್ ರಸ್ತೆಯಲ್ಲಿ ಕಳೆದ ಸೋಮವಾರ ಬಾಂಬ್ ಸ್ಫೋಟ ಸಂಭವಿಸಿತ್ತು.

ಗುರುವಾರ ದಕ್ಷಿಣ ಸಿಂಧ್ ಪ್ರಾಂತ್ಯದ ಸೂಫಿ ದರ್ಗಾದಲ್ಲಿ 8 ಜನರ ಸಾವಿಗೆ ಕಾರಣವಾಗಿದ್ದ ಆತ್ಮಾಹುತಿ ಬಾಂಬ್ ದಾಳಿ ಬಳಿಕ ಪಾಕಿಸ್ತಾನದಾದ್ಯಂತ ಭದ್ರತೆ ಹೆಚ್ಚಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.