ADVERTISEMENT

ಪಾಕ್‌ ಆರೋಪ ತಳ್ಳಿಹಾಕಿದ ವಿಶ್ವಸಂಸ್ಥೆ

ಪಿಟಿಐ
Published 25 ಮೇ 2017, 6:31 IST
Last Updated 25 ಮೇ 2017, 6:31 IST
ಪಾಕ್‌ ಆರೋಪ ತಳ್ಳಿಹಾಕಿದ ವಿಶ್ವಸಂಸ್ಥೆ
ಪಾಕ್‌ ಆರೋಪ ತಳ್ಳಿಹಾಕಿದ ವಿಶ್ವಸಂಸ್ಥೆ   

ವಿಶ್ವಸಂಸ್ಥೆ: ಗಡಿ ನಿಯಂತ್ರಣ ರೇಖೆ(ಎಲ್‌ಒಸಿ) ಬಳಿ ವಿಶ್ವಸಂಸ್ಥೆಯ ಮಿಲಿಟರಿ ವೀಕ್ಷಕ ತಂಡದ ವಾಹನವನ್ನು ಗುರಿಯಾಗಿರಿಸಿ ಭಾರತೀಯ ಸೇನೆಯ ದಾಳಿ ನಡೆಸಿದೆ ಎಂಬ ಪಾಕಿಸ್ತಾನದ ಹೇಳಿಕೆಗೆ ಯಾವುದೇ ಪುರಾವೆಗಳಿಲ್ಲ ಎಂದು ವಿಶ್ವಸಂಸ್ಥೆ ಹೇಳಿದೆ.   

ಭಾರತ ಮತ್ತು ಪಾಕಿಸ್ತಾನದಲ್ಲಿನ ವಿಶ್ವಸಂಸ್ಥೆಯ ಮಿಲಿಟರಿ ವೀಕ್ಷಕ ತಂಡ(ಯುಎನ್‌ಎಚ್ಒಜಿಐಪಿ) ವಾಹನವನ್ನು ಗಡಿ ನಿಯಂತ್ರಣ ರೇಖೆಯ ಖನ್ಜರ್‌ ವಲಯದ ಬಳಿ ಭಾರತೀಯ ಸೇನೆಯು ಗುರಿಯಾಗಿರಿಸಿದೆ ಎಂಬುದಕ್ಕೆ ಯಾವುದೇ ಸಾಕ್ಷ್ಯಗಳಿಲ್ಲ ಎಂದು ವಿಶ್ವಸಂಸ್ಥೆಯ ಕಾರ್ಯದರ್ಶಿ ಆಂಟೋನಿಯೊ ಗುಟರ್ರೆಸ್‌ ಅವರ ವಕ್ತಾರ ಸ್ಟೀಫನ್‌ ಡುವಾರಿಕ್‌ ಅವರು ಹೇಳಿದ್ದಾರೆ.

ವಿಶ್ವಸಂಸ್ಥೆಯ ಮಿಲಿಟರಿ ವೀಕ್ಷಕರ ವಾಹನದ ಮೇಲೆ ಗುಂಡಿನ ಗುರಿ ಇದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಮಿಲಿಟರಿ ವೀಕ್ಷಕರಿಗೆ ಯಾವುದೇ ಗಾಯಗಳಾಗಿಲ್ಲ ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ADVERTISEMENT

ಎಲ್‌ಒಸಿಯಲ್ಲಿ ಭಾರತೀಯ ಸೇನೆ ದಾಳಿ ನಡೆಸಿದ ಬಳಿಕ ವಿಶ್ವಸಂಸ್ಥೆಯ ಮಿಲಿಟರಿ ವೀಕ್ಷಕ ಗುಂಪಿನ ಗಾಯಗೊಂಡಿದ್ದ ಇಬ್ಬರು ಅಧಿಕಾರಿಗಳನ್ನು ಸಾಗಿಸಲಾಗುತ್ತಿತ್ತು ಎಂದು ಪಾಕಿಸ್ತಾನದ ಭದ್ರತಾಪಡೆ ಮಾಧ್ಯಮ ವಿಭಾಗದ ಹೇಳಿತ್ತು. ಇದಕ್ಕೆ ವಿಶ್ವಸಂಸ್ಥೆ ಪ್ರತಿಕ್ರಿಯೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.