ADVERTISEMENT

ಫ್ರಾನ್ಸ್‌ ಅನಿಲ ಘಟಕದಲ್ಲಿ ಐಎಸ್‌ ದಾಳಿ

​ಪ್ರಜಾವಾಣಿ ವಾರ್ತೆ
Published 26 ಜೂನ್ 2015, 11:06 IST
Last Updated 26 ಜೂನ್ 2015, 11:06 IST

ಸೇಂಟ್‌ ಕ್ವೆಂಟೈನ್‌ ಫಲ್ಲಾವೆರ್‌, ಫ್ರಾನ್ಸ್‌ (ಎಎಫ್‌ಪಿ): ಪೂರ್ವ ಫ್ರಾನ್ಸ್‌ನ ಅನಿಲ ಘಟಕದಲ್ಲಿ ಐಎಸ್‌ ಉಗ್ರರು ಶುಕ್ರವಾರ ನಡೆಸಿದ ದಾಳಿಯಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟು, ಹಲವರು ಗಾಯಗೊಂಡಿದ್ದಾರೆ.

ವಾಹನವೊಂದು ಅನಿಲ ಘಟಕದೊಳಗೆ ಬರುತ್ತಿದ್ದಂತೆ ಸ್ಫೋಟ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ.

ರುಂಡವಿಲ್ಲ ದೇಹವೊಂದು ಅನಿಲ ಘಟಕದ ಆವರಣದಲ್ಲಿ ಪತ್ತೆಯಾಗಿದೆ. ಸ್ಫೋಟದಿಂದ ಆ ದೇಹದ ತಲೆ ಕತ್ತರಿಸಿದೆಯೋ ಅಥವಾ ಉಗ್ರರು ತಲೆ ಕತ್ತರಿಸಿದ ಮೃತದೇಹವನ್ನು ತಂದು ಎಸೆದಿದ್ದಾರೋ ಎಂಬುದು ಇನ್ನೂ ತಿಳಿದುಬಂದಿಲ್ಲ ಎಂದು ಮೂಲಗಳು ಹೇಳಿವೆ.

ADVERTISEMENT

ವಾಹನದಲ್ಲಿ ಅರೇಬಿಕ್‌ ಅಕ್ಷರಗಳಿದ್ದ ಕಪ್ಪು ಧ್ವಜ ಕಂಡು ಬಂದಿದೆ. ಮೇಲ್ನೋಟಕ್ಕೆ ಇದು ಐಎಸ್‌ ಉಗ್ರರ ದಾಳಿ ಎಂಬುದು ಗೊತ್ತಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.