ADVERTISEMENT

ಬಾಲಕಿಯನ್ನು ಕಚ್ಚಿ ನೀರಿಗೆಳೆದ ಕಡಲ ಸಿಂಹ

ಏಜೆನ್ಸೀಸ್
Published 22 ಮೇ 2017, 9:04 IST
Last Updated 22 ಮೇ 2017, 9:04 IST
ಬಾಲಕಿಯನ್ನು ಕಚ್ಚಿ ನೀರಿಗೆಳೆದ ಕಡಲ ಸಿಂಹ
ಬಾಲಕಿಯನ್ನು ಕಚ್ಚಿ ನೀರಿಗೆಳೆದ ಕಡಲ ಸಿಂಹ   

ಕಿಲಕಿಲ ನಗುತ್ತ ಹಡುಕಟ್ಟೆ ಮೇಲೆ ಕುಳಿತ ಬಾಲಕಿಯನ್ನು ಕಡಲ ಸಿಂಹ ಕಚ್ಚಿ ನೀರಿಗೆ ಎಳೆದುಕೊಂಡು ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಇದರ ವಿಡಿಯೋ ವೈರಲ್‌ ಆಗಿದೆ.

ಕೆನಡಾದ ಸ್ಟಿವೆಸ್ಟನ್‌ ಫಿಷರ್‌ಮನ್ಸ್‌ ಹಡುಕಟ್ಟೆಯಲ್ಲಿ ಈ ಘಟನೆ ನಡೆದಿದ್ದು, ಶನಿವಾರ ಯುಟ್ಯೂಬ್‌ನಲ್ಲಿ ವಿಡಿಯೋ ಪ್ರಕಟಿಸಲಾಗಿದೆ. ಈ ವಿಡಿಯೋ ಈಗಾಗಲೇ 71 ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದೆ.

ನೀರಿನಲ್ಲಿ ಮೀನಿನ ಹುಡುಕಾಟ ನಡೆಸಿದ್ದ ಕಡಲ ಸಿಂಹವನ್ನು ಗಮನಿಸುತ್ತಿದ್ದ ಪ್ರವಾಸಿಗರು ಫೋಟೋ ಕ್ಲಿಕ್ಕಿಸುವುದರಲ್ಲಿ ಮಗ್ನರಾಗಿದ್ದರು. ನೀರಿನಿಂದ ಮೇಲೆದ್ದ ಕಡಲ ಸಿಂಹ ಒಮ್ಮೆ ಬಾಲಕಿಯ ಮುಖದ ಸಮೀಪಕ್ಕೆ ಜಿಗಿಯಿತು.

ADVERTISEMENT

ಹತ್ತಿರದಲ್ಲಿಯೇ ಜಿಗಿದ ಕಡಲ ಸಿಂಹವನ್ನು ಕಂಡ ಬಾಲಕಿ ಕಿಲಕಿಲ ನಗುತ್ತ ಸಂಭ್ರಮಿಸುತ್ತಿದ್ದಳು. ಹಾಗೇ  ಹಡಗುಕಟ್ಟೆ ಮೇಲೆ ಕುಳಿತ  ಬಾಲಕಿಯನ್ನು ಅದೇ ಪ್ರಾಣಿ ಕಚ್ಚಿ ಒಮ್ಮೆಲೆ ನೀರಿಗೆ ಎಳೆದುಕೊಂಡಿತು.

ಪ್ರವಾಸಿಗರಲ್ಲಿ ಸಂಭ್ರಮ ಮಾಯವಾಗಿ ಆತಂಕ ಸೃಷ್ಟಿಯಾಯಿತು. ತಕ್ಷಣ ನೀರಿಗೆ ಹಾರಿದ ವ್ಯಕ್ತಿಯೊಬ್ಬರು ಬಾಲಕಿಯನ್ನು ನೀರಿನಿಂದ ಮೇಲೇತ್ತಿದರು.

ತಜ್ಞರ ಪ್ರಕಾರ ಕಡಲಸಿಂಹಗಳು ಮನುಷ್ಯರ ಮೇಲೆ ಹೆಚ್ಚು ಆಕ್ರಮಣ ಮಾಡುವುದಿಲ್ಲ. ಬಿಳಿಯ ಉಡುಪನ್ನು ಆಹಾರ ಪದಾರ್ಥ ಎಂದು ತಿಳಿದು ಜಿಗಿದು ಎಳೆದಿರಬಹುದು ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.