ADVERTISEMENT

ಬೃಹತ್‌ ಮೂಷಿಕ ಕುಟುಂಬಕ್ಕೆ ಹೊಸ ಸದಸ್ಯ

ಪಿಟಿಐ
Published 21 ಏಪ್ರಿಲ್ 2017, 19:30 IST
Last Updated 21 ಏಪ್ರಿಲ್ 2017, 19:30 IST
ಬೃಹತ್‌ ಮೂಷಿಕ ಕುಟುಂಬಕ್ಕೆ ಹೊಸ ಸದಸ್ಯ
ಬೃಹತ್‌ ಮೂಷಿಕ ಕುಟುಂಬಕ್ಕೆ ಹೊಸ ಸದಸ್ಯ   

ಲಂಡನ್: ಅಳಿವಿನಂಚಿನಲ್ಲಿರುವ ಜಗತ್ತಿನ ಅತಿ ದೊಡ್ಡ ಮೂಷಿಕ ಪ್ರಭೇದಕ್ಕೆ ಸೇರಿದ ‘ಲಿಲಿ’ ಇಂಗ್ಲೆಂಡ್‌ನ ಮೃಗಾಲಯದಲ್ಲಿ ಮರಿಯೊಂದಕ್ಕೆ ಜನ್ಮ ನೀಡಿದೆ.

‘ದಿ ಸೀಕ್ರೆಟ್‌ ಲೈಫ್‌ ಆಫ್‌ ದಿ ಜೂ’ ಟೆಲಿವಿಷನ್‌ ಸರಣಿಯಲ್ಲಿ ಕಾಣಿಸಿಕೊಳ್ಳುವ ಮೂಲಕ ಪ್ರಸಿದ್ಧಿಗೆ ಬಂದಿದ್ದ ಆರು ವರ್ಷ ‘ಲಿಲಿ’ ಇಲ್ಲಿನ ಚೆಸ್ಟರ್‌ ಜೂನಲ್ಲಿ ಮರಿಗೆ ಜನ್ಮವಿತ್ತಿದೆ.

ಕ್ಯಾಪಿಬರಾ ಪ್ರಭೇದಕ್ಕೆ ಸೇರಿದ ಬೃಹತ್‌ ಗಿನಿ ಇಲಿಗಳು (ಗಿನಿ ಪಿಗ್‌) 1.5 ಮೀಟರ್‌ ಉದ್ದದವರೆಗೂ ಬೆಳೆಯುತ್ತವೆ.

ADVERTISEMENT

ದಕ್ಷಿಣ ಅಮೆರಿಕದ ಹುಲ್ಲುಗಾವಲು, ಉಷ್ಣವಲಯದ ಕಾಡುಗಳು ಮತ್ತು ಜಲಪ್ರದೇಶಗಳಲ್ಲಿ  ಕಂಡುಬರುವ ಈ ಮೂಷಿಕಗಳು, ಹೆಚ್ಚಿನ ಸಮಯವನ್ನು ನೀರಿನಲ್ಲಿಯೇ ಕಳೆಯುತ್ತವೆ.

ಇವುಗಳಿಗೆ ‘ಜಲ ಮೂಷಿಕ’ ಎಂಬ ವೈಜ್ಞಾನಿಕ ಹೆಸರಿದೆ. ಈಜಲು ಅನುಕೂಲಕರವಾದ ದೇಹ ರಚನೆ ಹೊಂದಿವೆ. ಕಣ್ಣು ಮತ್ತು ಕಿವಿಗಳು ತಲೆಯ ಮೇಲ್ಭಾಗದಲ್ಲಿ ಇರುತ್ತವೆ. ಬಲೆಯಂತಹ ಪರದೆಯುಳ್ಳ ಕಾಲುಗಳು ಈಜಲು ನೆರವಾಗುತ್ತವೆ.

ವಾಸಸ್ಥಳಗಳ ನಾಶ, ಮಾಂಸ ಮತ್ತು ಚರ್ಮಕ್ಕಾಗಿ ಅಕ್ರಮ ಹತ್ಯೆ ಕಾರಣಗಳಿಂದ ಈ ಪ್ರಭೇದದ ಇಲಿಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ಅಪರೂಪವಾಗುತ್ತಿರುವ ಈ ಮೂಷಿಕಗಳ ಕುಟುಂಬಕ್ಕೆ ಹೊಸ ಸದಸ್ಯನ ಸೇರ್ಪಡೆಯಾಗಿರುವುದು ಅವುಗಳ ರಕ್ಷಣೆಯತ್ತ ಗಮನ ಸೆಳೆಯಲು ಸಾಧ್ಯವಾಗಬಹುದು ಎಂದು ಮೃಗಾಲಯ ವಿಶ್ವಾಸ ವ್ಯಕ್ತಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.