ADVERTISEMENT

ಬೃಹತ್ ವಿಮಾನಗಳಿಗೆ ನೇಪಾಳ ನಿರ್ಬಂಧ

​ಪ್ರಜಾವಾಣಿ ವಾರ್ತೆ
Published 3 ಮೇ 2015, 11:26 IST
Last Updated 3 ಮೇ 2015, 11:26 IST
ಬೃಹತ್ ವಿಮಾನಗಳಿಗೆ ನೇಪಾಳ ನಿರ್ಬಂಧ
ಬೃಹತ್ ವಿಮಾನಗಳಿಗೆ ನೇಪಾಳ ನಿರ್ಬಂಧ   

ಕಠ್ಮಂಡು (ಐಎಎನ್‌ಎಸ್‌ ವರದಿ): ಐದು ದಶಕಗಳಷ್ಟು ಹಳೆಯದಾಗಿರುವ ತ್ರಿಭುವನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮತ್ತಷ್ಟು ಹಾನಿಯಾಗುವುದನ್ನು ತಡೆಯುವ ನಿಟ್ಟಿನಲ್ಲಿ ಪರಿಹಾರ ಸಾಮಗ್ರಿಗಳನ್ನು ಹೊತ್ತು ಬರುತ್ತಿರುವ ಬೃಹತ್ ವಿಮಾನಗಳ ಮೇಲೆ ನೇಪಾಳ ನಿರ್ಬಂಧ ವಿಧಿಸಿದೆ.

ಅಂದರೆ, 196 ಟನ್‌ಗಳಿಗೂ ಅಧಿಕ ಭಾರ ತೂಗುವ ವಿಮಾನ ಇಳಿಯಲು ಪರವಾನಗಿ ನಿರಾಕರಿಸಲು ನಿರ್ಧರಿಸಲಾಗಿದೆ.

ರನ್‌ವೇಯಲ್ಲಿ ಮೂರು ಬಿರುಕುಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಈ ನಿಲ್ದಾಣದಲ್ಲಿ ಕಳೆದೊಂದು ವಾರದಲ್ಲಿ 150 ನಾಗರಿಕ ವಿಮಾನಗಳು ಸೇರಿದಂತೆ 300ಕ್ಕೂ ಹೆಚ್ಚು ರಕ್ಷಣಾ ವಿಮಾನಗಳು ಇಳಿದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.