ADVERTISEMENT

ಬ್ರಿಟನ್‌ ಚುನಾವಣೆ: ಕ್ಯಾಮೆರಾನ್‌ಗೆ ಮತ್ತೆ ಗೆಲುವು

​ಪ್ರಜಾವಾಣಿ ವಾರ್ತೆ
Published 8 ಮೇ 2015, 10:19 IST
Last Updated 8 ಮೇ 2015, 10:19 IST

ಲಂಡನ್‌ (ಪಿಟಿಐ); ಬ್ರಿಟನ್‌ ಸಂಸತ್ತಿಗೆ ಗುರುವಾರ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಆಡಳಿತಾರೂಢ ಕನ್ಸರ್ವೇಟಿವ್‌ ಪಕ್ಷ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದೆ ಎಂದು ಬಿಬಿಸಿ ಸುದ್ದಿ ವಾಹಿನಿ ವರದಿ ಮಾಡಿದೆ.

ಡೇವಿಡ್‌ ಕ್ಯಾಮೆರಾನ್‌ ಅವರು ಪ್ರಧಾನಿಯಾಗಿ ಮತ್ತೆ ಐದು ವರ್ಷಗಳ ಕಾಲ ಅಧಿಕಾರ ನಡೆಸಲಿದ್ದಾರೆ.

ವಿರೋಧ ಪಕ್ಷವಾಗಿರುವ ಲೇಬರ್ ಪಕ್ಷ ಮತ್ತು ಕನ್ಸರ್ವೇಟಿವ್‌ ಪಕ್ಷದ  ನಡುವೆ ತೀವ್ರ ಹಣಾಹಣಿ ಏರ್ಪಟ್ಟಿತ್ತು.  

ADVERTISEMENT

650 ಕ್ಷೇತ್ರಗಳ ಪೈಕಿ ಕನ್ಸರ್ವೇಟಿವ್‌ ಪಕ್ಷ 325 ಸ್ಥಾನಗಳಲ್ಲಿ ಗೆಲುವು ದಾಖಲಿಸಿದರೆ, ಲೇಬರ್‌ ಪಕ್ಷ 230 ಸ್ಥಾನಗಳನ್ನು ಗೆಲ್ಲುವಲ್ಲಿ ಮಾತ್ರ ಯಶಸ್ವಿಯಾಗಿದೆ ಎಂದು ಬಿಬಿಸಿ ವರದಿ ಮಾಡಿದೆ.

323 ಸ್ಥಾನಗಳನ್ನು ಪಡೆದ ಪಕ್ಷ ಕೆಳ ಮನೆಯಲ್ಲಿ ಅಧಿಕಾರಕ್ಕೆ ಬರಲಿದೆ. 6.15 ಲಕ್ಷ ಭಾರತ ಮೂಲದ ಮತದಾರರು ಅಭ್ಯರ್ಥಿಗಳ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.