ADVERTISEMENT

ಲಖ್ವಿಗೆ ಬಿಡುಗಡೆ ಭಾಗ್ಯ ಇಲ್ಲ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2014, 13:25 IST
Last Updated 20 ಡಿಸೆಂಬರ್ 2014, 13:25 IST

ಇಸ್ಲಾಮಾಬಾದ್(ಐಎಎನ್ ಎಸ್): ಮುಂಬೈ ದಾಳಿಯ ಸಂಚುಕೋರ ಲಷ್ಕರ್–ಎ–ತಯಬಾ (ಎಲ್ಇಟಿ) ಕಾರ್ಯಾ­ಚರಣೆ ಮುಖ್ಯಸ್ಥ ಝಕಿವುರ್ ರೆಹ­ಮಾನ್ ಲಖ್ವಿಯ ಸೆರೆವಾಸ ವಿಸ್ತರಿಸಲಾಗಿದ್ದು, ಹೈಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಲು ಪಾಕ್ ಸರ್ಕಾರ ಅಗತ್ಯ ಕ್ರಮ ಕೈಗೊಂಡಿದೆ. ಭಾರತವೂ ಕೂಡ ಸಂಜೋತಾ ಎಕ್ಸ್ ಪ್ರಸ್ ರೈಲು ಸ್ಫೋಟ ಪ್ರಕರಣ ಕುರಿತು ವಿಚಾರಣೆ ಕೈಗೆತ್ತಿಕೊಳ್ಳಲು ಇದು ಸಕಾಲ ಎಂದು ಪಾಕಿಸ್ತಾನದ ಪ್ರಧಾನಿ ಸಲಹೆಗಾರ ಎಸ್. ಅಜೀಜ್ ಹೇಳಿದ್ದಾರೆ.

2007ರಲ್ಲಿ ದೆಹಲಿ-ಲಾಹೋರ್ ಮಧ್ಯೆ ಸಂಚರಿಸುತ್ತಿದ್ದ ಸಂಜೋತಾ ಎಕ್ಸ್ ಪ್ರಸ್ ರೈಲು ಸ್ಫೋಟ ನಡೆದಿತ್ತು. ಘಟನೆಯಲ್ಲಿ ಕನಿಷ್ಠ 70 ಮಂದಿ ಮೃತಪಟ್ಟಿದ್ದರು. ಮೃತಪಟ್ಟವರೆಲ್ಲ ಬಹುತೇಕ ಪಾಕಿಸ್ತಾನದವರು.

‘ಮುಂಬೈ ಮೇಲಿನ ದಾಳಿಯಲ್ಲಿ ಮುಗ್ಧ ಜನರು ಜೀವ ಕಳೆದು­ಕೊಂಡಿದ್ದರು. ಈ ಜಾಮೀನು ಆದೇಶ­ವನ್ನು ಒಪ್ಪು­ವುದಕ್ಕೆ ಸಾಧ್ಯ­ವಿಲ್ಲ. ವಿಶ್ವ­ಸಂಸ್ಥೆಯ ಭದ್ರತಾ ಮಂಡಳಿಯು ಲಖ್ವಿ­ಯನ್ನು ಅಂತರರಾಷ್ಟ್ರೀಯ ಉಗ್ರ ಎಂದು ಘೋಷಿ­ಸಿದೆ. ಇಂಥ ವ್ಯಕ್ತಿಗೆ ಜಾಮೀನು ಸಿಕ್ಕಿರುವುದು ದುರದೃಷ್ಟಕರ’ ಎಂದು ಭಾರತ ತೀವ್ರ ಆಕ್ರೋಶ ವ್ಯಕ್ತಪ­ಡಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.