ADVERTISEMENT

ಲಾಸ್ಏಂಜಲೀಸ್: ಸ್ಮಾರ್ಟ್‌ಫೋನ್‌ ಮದುವೆಯಾದ ಕಲಾ ನಿರ್ದೇಶಕ!

​ಪ್ರಜಾವಾಣಿ ವಾರ್ತೆ
Published 29 ಜೂನ್ 2016, 19:30 IST
Last Updated 29 ಜೂನ್ 2016, 19:30 IST

ಲಾಸ್‌ ಏಂಜಲೀಸ್‌ (ಪಿಟಿಐ): ಸ್ಮಾರ್ಟ್‌ಫೋನ್‌ ವ್ಯಾಮೋಹಕ್ಕೆ ಸಿಲುಕಿದ ಕಲಾ ನಿರ್ದೇಶಕನೊಬ್ಬ ಅದನ್ನೇ ವಿವಾಹವಾಗಿರುವ ಪ್ರಸಂಗವೊಂದು ವರದಿಯಾಗಿದೆ.

ಲಾಸ್‌ವೆಗಾಸ್‌ನ ಚರ್ಚ್‌ನಲ್ಲಿ ನಡೆದ ಸಮಾರಂಭದಲ್ಲಿ ಸ್ಮಾರ್ಟ್‌ಫೋನ್ ಅನ್ನು ವರಿಸುವ ಮೂಲಕ ತನ್ನ ಪ್ರೀತಿಯ ಅಭಿಲಾಷೆಯನ್ನು ವ್ಯಕ್ತಪಡಿಸಿದ್ದಾನೆ.
ಕಲಾ ನಿರ್ದೇಶಕ ಆರೋನ್‌ ಚೆರ್ವೆನಕ್‌ ಎನ್ನುವವರು ಈ ರೀತಿಯ ವಿಭಿನ್ನ ವಿವಾಹದ ಮೂಲಕ ಗಮನಸೆಳೆದಿದ್ದಾರೆ. ಲಾಸ್‌ಏಂಜಲೀಸ್‌ನಿಂದ 365 ಕಿ.ಮೀ ದೂರದಲ್ಲಿರುವ ಲಾಸ್‌ ವೆಗಾಸ್‌ಗೆ ತೆರಳಿದ ಆರೋನ್‌ ಚರ್ಚ್‌ನಲ್ಲಿ ಸಾಂಪ್ರದಾಯಿಕ ರೀತಿಯಲ್ಲಿ ವಿವಾಹವಾದರು. ವರ ಆರೋನ್‌ ಪೋಷಾಕು ಧರಿಸಿಕೊಂಡಿದ್ದರೆ, ವಧು ಸ್ಮಾರ್ಟ್‌ಫೋನ್‌ಗೆ ವಿಶೇಷ ರಕ್ಷಣಾ ಕವಚ   ಅಳವಡಿಸಲಾಗಿತ್ತು.

‘ನನ್ನ ಸ್ಮಾರ್ಟ್‌ಫೋನ್‌ ಜತೆ ಸುದೀರ್ಘವಾದ ಸಂಬಂಧ ಹೊಂದಿದ್ದೇನೆ. ಹಲವಾರು ಬಾರಿ ಭಾವನಾತ್ಮಕ ಸಂಬಂಧಗಳನ್ನು ಫೋನ್‌ ಮೂಲಕ ಜೋಡಿಸಿಕೊಳ್ಳುತ್ತೇವೆ.  ಸಾಂತ್ವನಗೊಳಿಸಲು ಸಹ ಫೋನ್‌ ಬೇಕು.  ಹೀಗಾಗಿ, ಪ್ರತಿಯೊಂದಕ್ಕೂ ಅದರ ಮೇಲೆ ಅವಲಂಬನೆಯಾಗಿದ್ದೇವೆ. ಈಗ ಮದುವೆಯಾಗುವ ಮೂಲಕ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಿಕೊಂಡಿದ್ದೇನೆ’ ಎಂದು  ಆರೋನ್‌ ತಿಳಿಸಿದ್ದಾರೆ. ಈ ವಿವಾಹಕ್ಕೆ ನೆವಡಾ ರಾಜ್ಯ ಕಾನೂನುಬದ್ಧ ಮಾನ್ಯತೆ ನೀಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.