ADVERTISEMENT

‘ಲಾ ಲಾ ಲ್ಯಾಂಡ್‌’ಗೆ ಐದು ವಿಭಾಗಗಳಲ್ಲಿ ಪ್ರಶಸ್ತಿ

ಅತ್ಯುತ್ತಮ ನಟ ‘ಕ್ಯಾಸೆ ಅಫ್ಲೆಕ್‌’, ನಟಿ ಎಮ್ಮಾ ಸ್ಟೋನ್‌

ಏಜೆನ್ಸೀಸ್
Published 27 ಫೆಬ್ರುವರಿ 2017, 11:16 IST
Last Updated 27 ಫೆಬ್ರುವರಿ 2017, 11:16 IST
‘ಲಾ ಲಾ ಲ್ಯಾಂಡ್‌’ಗೆ ಐದು ವಿಭಾಗಗಳಲ್ಲಿ ಪ್ರಶಸ್ತಿ
‘ಲಾ ಲಾ ಲ್ಯಾಂಡ್‌’ಗೆ ಐದು ವಿಭಾಗಗಳಲ್ಲಿ ಪ್ರಶಸ್ತಿ   

ಲಾಸ್ ಎಂಜಲೀಸ್‌: ಸಂಗೀತಮಯ ಪ್ರೇಮಕಥೆ ಹೊಂದಿರುವ ಸಿನಿಮಾ ‘ಲಾ ಲಾ ಲ್ಯಾಂಡ್‌’ 89ನೇ ಅಕಾಡೆಮಿ ಪ್ರಶಸ್ತಿಗಳ ಐದು ವಿಭಾಗಗಳಲ್ಲಿ ಪ್ರಶಸ್ತಿ ತನ್ನದಾಗಿಸಿಕೊಂಡಿದೆ.

ಲಾ ಲಾ ಲ್ಯಾಂಡ್‌ ಸಿನಿಮಾ ಆಸ್ಕರ್‌ ಪ್ರಶಸ್ತಿಯ 12 ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿತ್ತು. ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ನಟಿ, ಅತ್ಯುತ್ತಮ ಛಾಯಾಗ್ರಹಣ, ಪ್ರೊಡಕ್ಷನ್‌ ಡಿಸೈನ್‌ ಹಾಗೂ ಸಂಗೀತ ಸೇರಿದಂತೆ ಐದು ವಿಭಾಗಗಳಲ್ಲಿ ಪ್ರಶಸ್ತಿ ಪಡೆದಿದೆ.

ಈ ಬಾರಿ ಆಸ್ಕರ್‌ ಪ್ರಶಸ್ತಿ ಪಡೆದವರ ಪಟ್ಟಿ:
* ಅತ್ಯುತ್ತಮ ನಟ– ಕ್ಯಾಸೆ ಅಫ್ಲೆಕ್‌(ಮ್ಯಾನ್‌ಚೆಸ್ಟರ್‌ ಬೈ ದಿ ಸೀ)
* ಅತ್ಯುತ್ತಮ ಪೋಷಕ ನಟ– ಮಹೆರ್ಷಲಾ ಅಲಿ(ಮೂನ್‌ಲೈಟ್‌)
* ಅತ್ಯುತ್ತಮ ನಟಿ– ಎಮ್ಮಾ ಸ್ಟೋನ್‌ (ಲಾ ಲಾ ಲ್ಯಾಂಡ್‌)
* ಅತ್ಯುತ್ತಮ ಪೋಷಕ ನಟಿ– ವಯೋಲಾ ಡೇವಿಸ್‌ (ಫೆನ್ಸಸ್‌)
* ಆ್ಯನಿಮೇಟೆಡ್‌ ಚಿತ್ರ– ಜೂಟೋಪಿಯಾ
* ಛಾಯಾಗ್ರಹಣ– ಲಾ ಲಾ ಲ್ಯಾಂಡ್‌
* ವಸ್ತ್ರ ವಿನ್ಯಾಸ– ಫಂಟಾಸ್ಟಿಕ್‌ ಬೀಸ್ಟ್ಸ್‌ ಆ್ಯಂಡ್‌ ವೇರ್‌ ಟು ಫೈಂಡ್‌ ದೆಮ್‌
* ನಿರ್ದೇಶನ– ಡೇಮಿನ್‌ ಚಾಝೆಲ್ಲೆ(ಲಾ ಲಾ ಲ್ಯಾಂಡ್‌)
* ಸಾಕ್ಷ್ಯಚಿತ್ರ– ಒ.ಜೆ: ಮೇಡ್‌ ಇನ್‌ ಅಮೆರಿಕ
* ಸಾಕ್ಷ್ಯಚಿತ್ರ (ಶಾರ್ಟ್‌ ಸಬ್ಜೆಕ್ಟ್‌)– ದಿ ವೈಟ್ ಹೆಲ್ಮೆಟ್ಸ್‌
* ಫಿಲ್ಮಂ ಎಡಿಟಿಂಗ್‌– ಜಾನ್‌ ಗಿಲ್ಬರ್ಟ್‌(ಹ್ಯಾಕ್‌ಸಾ ರಿಡ್ಜ್‌)
* ವಿದೇಶಿ ಸಿನಿಮಾ– ದಿ ಸೇಲ್ಸ್‌ಮ್ಯಾನ್‌(ಇರಾನ್‌)
* ಮೇಕ್‌ಅಪ್‌ ಮತ್ತು ಕೇಶ ವಿನ್ಯಾಸ–ಸೂಯಿಸೈಡ್‌ ಸ್ಕ್ವಾಡ್‌
* ಸಂಗೀತ– ಜಸ್ಟಿನ್‌ ಹರ್ವಿಟ್ಜ್‌(ಲಾ ಲಾ ಲ್ಯಾಂಡ್‌)
* ಒರಿಜಿನಲ್‌ ಸಾಂಗ್‌– ಸಿಟಿ ಆಫ್‌ ಸ್ಟಾರ್ಸ್‌(ಲಾ ಲಾ ಲ್ಯಾಂಡ್‌)
* ಅತ್ಯುತ್ತಮ ಚಿತ್ರ– ಮೂನ್‌ಲೈಟ್‌
* ಪ್ರೊಡಕ್ಷನ್‌ ಡಿಸೈನ್‌– ಲಾ ಲಾ ಲ್ಯಾಂಡ್‌
* ಕಿರು ಚಿತ್ರ(ಆ್ಯನಿಮೇಟೆಡ್‌)– ಪೈಪರ್‌
* ಕಿರು ಚಿತ್ರ(ಲೈವ್‌ ಆ್ಯಕ್ಷನ್)– ಸಿಂಗ್‌
* ಸೌಂಡ್‌ ಎಡಿಟಿಂಗ್‌– ಸಿಲ್ವೇನ್‌ ಬೆಲೆಮೇರ್‌(ಅರೈವಲ್‌)
* ಸೌಂಡ್‌ ಮಿಕ್ಸಿಂಗ್‌– ಹ್ಯಾಕ್‌ಸಾ ರಿಡ್ಜ್‌
* ವಿಷುವಲ್‌ ಎಫೆಕ್ಟ್ಸ್‌– ದಿ ಜಂಗಲ್‌ ಬುಕ್‌
* ಚಿತ್ರಕಥೆ(ಕಥೆಯ ಅಳವಡಿಕೆ)– ಮೂನ್‌ಲೈಟ್‌
* ಚಿತ್ರಕಥೆ(ಸ್ವಂತ ಚಿತ್ರಕಥೆ)–ಮ್ಯಾನ್‌ಚೆಸ್ಟರ್‌ ಬೈ ದಿ ಸೀ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT