ADVERTISEMENT

ಶಾಪಿಂಗ್ ಸೆಂಟರ್ ಮೇಲೆ ಲಘು ವಿಮಾನ ಪತನ: ಐದು ಮಂದಿ ಸಾವು

ಏಜೆನ್ಸೀಸ್
Published 21 ಫೆಬ್ರುವರಿ 2017, 6:17 IST
Last Updated 21 ಫೆಬ್ರುವರಿ 2017, 6:17 IST
ಚಿತ್ರ ಕೃಪೆ: ಟ್ವಿಟರ್
ಚಿತ್ರ ಕೃಪೆ: ಟ್ವಿಟರ್   

ಮೆಲ್ಬರ್ನ್: ಆಸ್ಟ್ರೇಲಿಯಾದ ಮೆಲ್ಬರ್ನ್ ನಗರದಲ್ಲಿರುವ ವ್ಯಾಪಾರ ಕೇಂದ್ರದ ಮೇಲೆ ಲಘು ವಿಮಾನವೊಂದು ಪತನಗೊಂಡು ಸಂಭವಿಸಿದ ದುರಂತದಲ್ಲಿ ಐದು ಮಂದಿ ಸಾವಿಗೀಡಾಗಿದ್ದಾರೆ.

ವಿಮಾನ ಟೇಕ್ ಆಫ್ ಆದ ಕೂಡಲೇ ವಿಮಾನದ ನಿಯಂತ್ರಣ ತಪ್ಪಿ ವ್ಯಾಪಾರ ಕೇಂದ್ರದ ಮೇಲೆ ಪತನವಾಗಿದೆ. ಈ ಹೊತ್ತಲ್ಲಿ ಆ ವ್ಯಾಪಾರ ಕೇಂದ್ರ ಮುಚ್ಚಿದ್ದರಿಂದ ದೊಡ್ಡ ದುರಂತವೊಂದು ತಪ್ಪಿದೆ. ಸಾವಿಗೀಡಾದವರು ವಿಮಾನದಲ್ಲಿದ್ದ ಪ್ರಯಾಣಿಕರಾಗಿದ್ದಾರೆ.

ಸ್ಥಳೀಯ ಕಾಲಮಾನ ಮಂಗಳವಾರ ಬೆಳಗ್ಗೆ 9 ಗಂಟೆಗೆ ಈ ದುರ್ಘಟನೆ ಸಂಭವಿಸಿದೆ.

ADVERTISEMENT

ಉತ್ತರ ಮೆಲ್ಬರ್ನ್‍ನ ಎಸೆನ್‍ಡನ್ ಎಂಬಲ್ಲಿದ್ದ  ದಕ್ಷಿಣ ಮೆಲ್ಬರ್ನ್‍ನ ಕಿಂಗ್ ಐಲ್ಯಾಂಡ್‍ಗೆ ಈ ಖಾಸಗಿ ವಿಮಾನ ಪ್ರಯಾಣ ಬೆಳೆಸಿತ್ತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.