ADVERTISEMENT

ಸದನಕ್ಕೆ ಸೊಳ್ಳೆ ತಂದ ಸಂಸದ!

ಪಿಟಿಐ
Published 8 ಸೆಪ್ಟೆಂಬರ್ 2016, 19:30 IST
Last Updated 8 ಸೆಪ್ಟೆಂಬರ್ 2016, 19:30 IST

ವಾಷಿಂಗ್ಟನ್: ಝೈಕಾ ವೈರಸ್ ನಿರ್ಮೂಲನೆಗೆ ಕ್ರಮ ಕೈಗೊಳ್ಳದ ಅಮೆರಿಕ ಸರ್ಕಾರದ ಗಮನ ಸೆಳೆಯಲು ಸಂಸದರೊಬ್ಬರು ಸದನಕ್ಕೆ 100 ಸೊಳ್ಳೆಗಳನ್ನು ತಂದ ಘಟನೆ ನಡೆದಿದೆ.

ರಿಪಬ್ಲಿಕನ್ ಪಕ್ಷದ, ಫ್ಲಾರಿಡಾದ ಸಂಸದ ಡೇವಿಡ್ ಜಾಲಿ ಎಂಬುವರೇ ಈ ಪ್ರತಿಭಟನೆ ನಡೆಸಿದವರು. ಫ್ಲಾರಿಡಾದಲ್ಲಿ ಝೈಕಾ ವೈರಸ್ ನಿರ್ಮೂಲನೆಗೆ 110 ಕೋಟಿ ಡಾಲರ್‌ (₹ 73 ಸಾವಿರ ಕೋಟಿ) ನಿಧಿ ಒದಗಿಸುವ ವಿಧೇಯಕವನ್ನು ಸದನದಲ್ಲಿ ತಡೆಹಿಡಿಯಲಾಗಿದೆ. ಇದು ಡೇವಿಡ್ ಅಸಮಾಧಾನಕ್ಕೆ ಕಾರಣವೆನ್ನಲಾಗಿದೆ.

‘ಸೊಳ್ಳೆಗಳು ಝೈಕಾ ವೈರಸ್ ಹರಡುತ್ತವೆ. ಇದು ಭೀತಿಗೆ ಕಾರಣವಾಗಿದೆ. ವೈರಸ್ ನಿರ್ಮೂಲನೆ ಮಾಡಬೇಕಾದ ತುರ್ತು ಎದುರಾಗಿದೆ’ ಎಂದು ಡೇವಿಡ್ ಹೇಳಿದ್ದಾರೆ. ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ, ಫ್ಲಾರಿಡಾದಲ್ಲಿ 56 ಝೈಕಾ ಪ್ರಕರಣಗಳು ದಾಖಲಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.