ADVERTISEMENT

ಸ್ಪೆಲ್ಲಿಂಗ್‌ ಬೀ ಸ್ಪರ್ಧೆ: ಭಾರತೀಯ ವಿದ್ಯಾರ್ಥಿಗಳ ಐತಿಹಾಸಿಕ ಸಾಧನೆ

​ಪ್ರಜಾವಾಣಿ ವಾರ್ತೆ
Published 29 ಮೇ 2015, 10:20 IST
Last Updated 29 ಮೇ 2015, 10:20 IST

ವಾಷಿಂಗ್ಟನ್‌ (ಪಿಟಿಐ): ಭಾರತೀಯ ಮೂಲದ ಇಬ್ಬರು ವಿದ್ಯಾರ್ಥಿಗಳು ವಾಷಿಂಗ್ಟನ್‌ನಲ್ಲಿ ನಡೆದ ಸ್ಪೆಲ್ಲಿಂಗ್‌ ಬೀ  ಸ್ಪರ್ಧೆಯಲ್ಲಿ ಸಮ ಅಂಕ ಪಡೆದು ಅಂತಿಮವಾಗಿ ಐತಿಹಾಸಿಕ ಜಯ ದಾಖಲಿಸುವ ಮೂಲಕ ಎರಡನೆ ಬಾರಿಗೆ  ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ.

13 ವರ್ಷದ ವನ್ಯ ಶಿವಶಂಕರ್‌, ಹಾಗೂ 14 ವರ್ಷದ ಗೋಕುಲ್‌ ವೆಂಕಟಾಚಲಂ ಅವರು ಸ್ಕ್ರಿಪ್ಪ್ಸ್‌ ರಾಷ್ಟ್ರೀಯ ಸ್ಪೆಲ್ಲಂಗ್‌ ಬೀ ಸ್ಪರ್ಧೆಯಲ್ಲಿ ಜಯಶಾಲಿಗಳಾಗಿದ್ದು, ಚಿನ್ನದ ಟ್ರೋಫಿಯನ್ನು ಎತ್ತಿಹಿಡಿದಿದ್ದಾರೆ. ಇವರಿಗೆ ಒಟ್ಟು 37,000 ಡಾಲರ್‌ ನಗದು ಬಹುಮಾನ ಸಂದಿದೆ.

ಒಡಹುಟ್ಟಿದ ಮಾಜಿ ಚಾಂಪಿಯನ್‌ಗಳು   ಮತ್ತೆ ಪ್ರಶಸ್ತಿ ಪಡೆದಿರುವುದು ಇದೇ ಮೊದಲು.  ಅಮೆರಿಕದ ಒಕ್ಲಹೊಮಾದಲ್ಲಿ ನೆಲೆಸಿರುವ ಭಾರತೀಯ ಮೂಲದ ಕೊಲ್‌ ಶಫೆರ್‌ ರೇ ಮೂರನೆ ಸ್ಥಾನ ಪಡೆದಿರುವುದು ವಿಶೇಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT