ADVERTISEMENT

ಹಿಂದೂ ದೇವಾಲಕ್ಕೆ ಮುಸ್ಲಿಂ ಭದ್ರತಾ ಅಧಿಕಾರಿ ನೇಮಕ

​ಪ್ರಜಾವಾಣಿ ವಾರ್ತೆ
Published 24 ಜುಲೈ 2016, 19:30 IST
Last Updated 24 ಜುಲೈ 2016, 19:30 IST

ವಾಷಿಂಗ್ಟನ್‌ (ಪಿಟಿಐ): ಮುಂಬೈ ಮೂಲದ ಮುಸ್ಲಿಂ ಪೊಲೀಸ್‌ ಅಧಿಕಾರಿ ಅಮೆರಿಕದ ಇಂಡಿಯಾನಾಪೊಲಿಸ್‌ ನಗರದಲ್ಲಿನ ಅತಿ ದೊಡ್ಡ ಹಿಂದೂ ದೇವಾಲಯದ ಭದ್ರತಾ ಮುಖ್ಯಸ್ಥರಾಗಿ ಆಯ್ಕೆಯಾಗಿದ್ದಾರೆ. ಇದು ಅಂತರ್‌ಧರ್ಮಿಯ ಸಹಕಾರ ಹಾಗೂ ಸಾಮಾಜಿಕ ಸಾಮರಸ್ಯಕ್ಕೆ ಉದಾಹರಣೆಯಾಗಿದೆ.

ಬಾಕ್ಸಿಂಗ್‌ನಲ್ಲಿ ಚಾಂಪಿಯನ್‌ ಆಗಿರುವ ಲೆಫ್ಟಿನೆಂಟ್‌ ಜಾವೆದ್‌ ಖಾನ್‌ ಅವರು ಇಂಡಿಯಾನಾಪೊಲಿಸ್‌ ಹಿಂದೂ ದೇಗುಲದ ಭದ್ರತಾ ನಿರ್ದೇಶಕರಾಗಿ ನೇಮಕವಾಗಿದ್ದಾರೆ.  ಪ್ರತಿದಿನ ಸಾವಿರಾರು ಜನರು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ.

ಮುಂಬೈನಲ್ಲಿ ಜನಿಸಿದ ಖಾನ್   2001ರಿಂದ ಇಂಡಿಯಾನಾದಲ್ಲಿ ನೆಲೆಸಿದ್ದಾರೆ. ಅಮೆರಿಕದಲ್ಲಿ 1986ರಿಂದ ಅವರು ಅನೇಕ ಮಾರ್ಷಲ್‌ ಆರ್ಟ್ಸ್‌ ಚಾಂಪಿಯನ್‌ಷಿಪ್‌ಗಳಲ್ಲಿ ಭಾಗವಹಿಸಿದ್ದರು.

‘ನಾವೆಲ್ಲರೂ ಒಂದೇ. ನಾವು ಎಲ್ಲರೂ ದೇವರ ಮಕ್ಕಳು. ದೇವರು ಒಬ್ಬನೇ, ಆದರೆ ಅವನನ್ನು ವಿವಿಧ ರೀತಿಯಲ್ಲಿ, ವಿವಿಧ ಹೆಸರಿನಲ್ಲಿ ಕರೆಯುತ್ತೇವೆ. ನಾವು ಭಕ್ತಿಗಾಗಿ ಆರಿಸಿಕೊಂಡಿದ್ದೇವೆ’ ಎಂದು ಖಾನ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.