ADVERTISEMENT

ಹೃದಯದ ಅಂಗಾಂಶ ಸರಿಪಡಿಸಲು ಜೈವಿಕ ಸ್ಪ್ರೇ

ಹೊಲಿಗೆ ಇಲ್ಲದೆ ಸಮರ್ಥ ಚಿಕಿತ್ಸೆ

ಏಜೆನ್ಸೀಸ್
Published 24 ಮಾರ್ಚ್ 2017, 13:48 IST
Last Updated 24 ಮಾರ್ಚ್ 2017, 13:48 IST
ಹೃದಯದ ಅಂಗಾಂಶ ಸರಿಪಡಿಸಲು ಜೈವಿಕ ಸ್ಪ್ರೇ
ಹೃದಯದ ಅಂಗಾಂಶ ಸರಿಪಡಿಸಲು ಜೈವಿಕ ಸ್ಪ್ರೇ   

ವಾಷಿಂಗ್ಟನ್‌: ವಿಜ್ಞಾನಿಗಳು ವಿಶೇಷವಾದ ಜೈವಿಕ ಅಂಶಗಳಿರುವ ಸಿಂಪಡಕ(ಸ್ಪ್ರೇ) ಅಭಿವೃದ್ಧಿ ಪಡಿಸಿದ್ದು, ಹೊಲಿಗೆ ಹಾಕದೆಯೇ ಹೃದಯದ ಅಂಗಾಂಶ ಗುಣಪಡಿಸ ಬಹುದಾಗಿದೆ.

ಹೃದಯಾಘಾತದ ಸಂದರ್ಭದಲ್ಲಿ ಹೃದಯದ ಅಂಗಾಂಶಗಳಿಗೆ ಆಗುವ ಹಾನಿಯನ್ನು ಸುಲಭ ಹಾಗೂ ಸಮರ್ಥವಾಗಿ ಸರಿಪಡಿಸುವ ಕ್ರಮವನ್ನು ಅಮೆರಿಕದ ನಾರ್ಥ್‌ ಕರೋಲಿನಾ ವಿಶ್ವವಿದ್ಯಾಲಯದ ಸಂಶೋಧಕರು ಪ್ರಸ್ತುತ ಪಡಿಸಿದ್ದಾರೆ.

ಹಾನಿಯಾಗಿರುವ ಹೃದಯದ ಭಾಗದಲ್ಲಿ ಜೈವಿಕ ಅಂಶಗಳ ಸ್ಪ್ರೇ ಬಳಸಿ ಸಿಂಪಡಿಸಿದರೆ ಹೃದಯದ ಮೇಲೆ ಜೆಲ್‌ ರೀತಿಯ ಲೇಪವಾಗುತ್ತದೆ. ಈ ಮೂಲಕ ಅಂಗಾಂಶಗಳು ಹೊಲಿಗೆ ಅಥವಾ ಅಂಟಿಸುವ ವಸ್ತುಗಳನ್ನು ಬಳಸದೆ ಸರಿಯಾಗುವುದನ್ನು ಗಮನಿಸಲಾಗಿದೆ.

ADVERTISEMENT

ಸ್ಪ್ರೇ ಪೇಂಟಿಂಗ್‌ ತಂತ್ರಜ್ಞಾನವು 1990ರಿಂದ ಬೆಳವಣಿಗೆ ಕಂಡಿರುವ ಅಂಗಾಂಶ ತಂತ್ರಜ್ಞಾನದ ಸೂಚಕವಾಗಿದೆ ಎಂದು ನೆದರ್‌ಲೆಂಡ್‌ ರಾಡ್‌ಬೌಂಡ್‌ ವೈದ್ಯಕೀಯ ಕೇಂದ್ರದ ಜಾನ್‌ ಎ ಜಾನ್‌ಸೆನ್‌ ಅಭಿಪ್ರಾಯ ಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.