ADVERTISEMENT

₹2 ಲಕ್ಷ ಕೋಟಿ ದಾನ ನೀಡಲು ಮುಂದಾದ ಸೌದಿ ರಾಜಕುಮಾರ

​ಪ್ರಜಾವಾಣಿ ವಾರ್ತೆ
Published 2 ಜುಲೈ 2015, 19:30 IST
Last Updated 2 ಜುಲೈ 2015, 19:30 IST

ಲಂಡನ್‌ (ಐಎಎನ್‌ಎಸ್‌): ಸೌದಿ ಅರೇಬಿಯಾದ ಕೋಟ್ಯಧಿಪತಿ ರಾಜ ಕುಮಾರ ಅಲಾವಲೀದ್‌ ಬಿನ್‌ ತಲಾಲ್‌ ತಮ್ಮ 3200 ಕೋಟಿ ಡಾಲರ್‌ (ಸುಮಾರು ₹2 ಲಕ್ಷ ಕೋಟಿ) ಮೌಲ್ಯದ ಸಂಪತ್ತನ್ನು ಸಮಾಜಸೇವೆಗೆ ದಾನ ಮಾಡಲು ಚಿಂತನೆ ನಡೆಸಿದ್ದಾರೆ.

ಆರೋಗ್ಯ ಮತ್ತು ಪ್ರಕೃತಿ ವಿಕೋಪ ಪರಿಹಾರ ಕೆಲಸಗಳಲ್ಲಿ ತೊಡಗಿರುವ ಗುಂಪುಗಳಿಗೆ ತಮ್ಮಲ್ಲಿರುವ ಹಣವನ್ನು ನೀಡಲು ಅಲಾವಲೀದ್‌ ಬಯಸಿದ್ದಾರೆ ಎಂದು ‘ಡೈಲಿ ಮೇಲ್‌’ ವರದಿ ಮಾಡಿದೆ. ಮಹಿಳೆಯರ ಅಭ್ಯುದಯದ ಯೋಜನೆಗಳು ಮತ್ತು ರೋಗ ನಿರ್ಮೂಲನೆ ಕಾರ್ಯಕ್ರಮಗಳಿಗೂ ಹಣ ನೀಡಲು 60 ವರ್ಷ ವಯಸ್ಸಿನ ಅಲಾವಲೀದ್‌ ಯೋಚಿಸುತ್ತಿದ್ದಾರೆ.

ಇವರು ಸೌದಿ ಅರೇಬಿಯಾದ ಸ್ಥಾಪಕ ಇಬ್‌ನ್‌ ಸೌದ್‌ ಅವರ ಮೊಮ್ಮಗ. ಅಲಾವಲೀದ್‌ ತಮ್ಮ ತಂದೆ ನೀಡಿದ 30 ಸಾವಿರ ಡಾಲರ್‌ (ಸುಮಾರು ₹19 ಲಕ್ಷ) ಮತ್ತು ಮೂರು ಲಕ್ಷ ಡಾಲರ್‌ (ಸುಮಾರು ₹19 ಲಕ್ಷ) ಹೂಡಿಕೆ ಮಾಡಿ ವ್ಯಾಪಾರ ಆರಂಭಿಸಿದ್ದರು. 2005ರಲ್ಲಿ ಅವರ ಸಂಪತ್ತಿನ ಮೌಲ್ಯ ಸಾವಿರ ಕೋಟಿ ಡಾಲರ್‌ (₹63 ಸಾವಿರ ಕೋಟಿ) ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.