ADVERTISEMENT

2010- 2012ರ ಅವಧಿಯಲ್ಲಿ ಅಮೆರಿಕದ 20 ಬೇಹುಗಾರರನ್ನು ವಧಿಸಿದ ಚೀನಾ

ಏಜೆನ್ಸೀಸ್
Published 21 ಮೇ 2017, 7:37 IST
Last Updated 21 ಮೇ 2017, 7:37 IST
2010- 2012ರ ಅವಧಿಯಲ್ಲಿ ಅಮೆರಿಕದ 20 ಬೇಹುಗಾರರನ್ನು ವಧಿಸಿದ ಚೀನಾ
2010- 2012ರ ಅವಧಿಯಲ್ಲಿ ಅಮೆರಿಕದ 20 ಬೇಹುಗಾರರನ್ನು ವಧಿಸಿದ ಚೀನಾ   

ವಾಷಿಂಗ್ಟನ್: ಬೇಹುಗಾರಿಕೆ ಮೂಲಕ ರಹಸ್ಯಗಳನ್ನು ಸೋರಿಕೆ ಮಾಡಲು ಯತ್ನಿಸಿದ್ದ ಅಮೆರಿಕದ ಗೂಢಚಾರರನ್ನು ಹತ್ಯೆ ಮಾಡುವ ಮೂಲಕ ಚೀನಾ, ಅಮೆರಿಕಕ್ಕೆ ದೊಡ್ಡ ಹೊಡೆತವನ್ನೇ ನೀಡಿದೆ.

2010- 2012ರ ಅವಧಿಯಲ್ಲಿ ಚೀನಾದ ರಹಸ್ಯಗಳನ್ನು ಸೋರಿಕೆ ಮಾಡಲು ಪ್ರಯತ್ನಿಸಿದ್ದ ಅಮೆರಿಕದ ಕೇಂದ್ರ ಬೇಹುಗಾರಿಕಾ ಸಂಸ್ಥೆಯ (ಸಿಐಎ) ಸುಮಾರು 20 ಸದಸ್ಯರನ್ನು ಚೀನಾ ಹತ್ಯೆ ಮಾಡಿದೆ. ಇನ್ನು ಕೆಲವು ಗೂಢಚಾರರು ಚೀನಾದ ಜೈಲಿನಲ್ಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಗೂಢಚರರನ್ನು ಹತ್ಯೆಗೈದ ಸುದ್ದಿಯನ್ನು ಪ್ರಕಟಿಸಿದ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ, ವಿದೇಶದಲ್ಲಿರುವ ಗೂಢಚರರೊಂದಿದೆ ಸಿಐಎ ಅಧಿಕಾರಿಗಳು ನಡೆಸಿದ ಸಂಭಾಷಣೆಯನ್ನು ಪತ್ತೆ ಹಚ್ಚುವ ಮೂಲಕ ಚೀನಾ, ಅಮೆರಿಕದ ರಹಸ್ಯ ಕಾರ್ಯವನ್ನು ಭೇದಿಸಿತ್ತು ಎಂದಿದೆ.

ADVERTISEMENT

ಅದೇ ವೇಳೆ, ಸಿಐಎಯಲ್ಲಿರುವ ಕೆಲವು ಅಧಿಕಾರಿಗಳೇ ಮೋಸದಾಟ ನಡೆಸಿದ್ದರಿಂದ ಗೂಢಚರರು ಸಿಕ್ಕಿ ಬಿದ್ದಿದ್ದಾರೆ ಎಂದು ದ ಟೈಮ್ಸ್ ಪತ್ರಿಕೆ ಅಭಿಪ್ರಾಯ ಪಟ್ಟಿದೆ.

ಆದಾಗ್ಯೂ, ಅಮೆರಿಕದ ಬೇಹುಗಾರಿಕೆ ಬಗ್ಗೆ ಚೀನಾಗೆ ಯಾವ ಮೂಲದಿಂದ ಮಾಹಿತಿ ಸಿಕ್ಕಿತು ಎಂಬುದರ ಬಗ್ಗೆ ಅಮೆರಿಕದ ಗುಪ್ತಚರ ಸಂಸ್ಥೆಯ ಅಧಿಕಾರಿಗಳಿಗೂ ಸ್ಪಷ್ಟ ಮಾಹಿತಿ ಇಲ್ಲ. ಈ ವಿಷಯದ ಬಗ್ಗೆ ಪ್ರತಿಕ್ರಿಯೆ ನೀಡಲು ಸಿಐಎ ನಿರಾಕರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.