ADVERTISEMENT

ಕಟ್ಟಡ ತ್ಯಾಜ್ಯಕ್ಕೆ ಮರುಜೀವ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2017, 19:30 IST
Last Updated 16 ಫೆಬ್ರುವರಿ 2017, 19:30 IST
ಕಟ್ಟಡ ತ್ಯಾಜ್ಯಕ್ಕೆ ಮರುಜೀವ
ಕಟ್ಟಡ ತ್ಯಾಜ್ಯಕ್ಕೆ ಮರುಜೀವ   

ಹೊಸ ಕಟ್ಟಡಗಳ ನಿರೀಕ್ಷೆಯಲ್ಲಿ ಹಳೆ ಕಟ್ಟಡಗಳು ನೆಲಕ್ಕುರುಳುತ್ತಿವೆ. ಅವುಗಳೆಲ್ಲಾ ತ್ಯಾಜ್ಯವಾಗಿ ಭೂಮಿಯೊಡಲು ಸೇರುತ್ತಿವೆ. ಆದರೆ ಜರ್ಮನಿಯ ಕಂಪೆನಿಯೊಂದು ತ್ಯಾಜ್ಯ ಕಾಂಕ್ರಿಟ್‌ ಮರುಬಳಕೆ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ. ಈ ತಂತ್ರಜ್ಞಾನದಿಂದ ನಿರ್ಮಾಣ ತ್ಯಾಜ್ಯದ ಶೇ 90ರಷ್ಟು ವಸ್ತುಗಳ ಮರುಬಳಕೆ ಸಾಧ್ಯ.

ಕಾಂಕ್ರಿಟ್ ತ್ಯಾಜ್ಯವನ್ನು ವಿವಿಧ ಹಂತದ ಪ್ರಕ್ರಿಯೆಯ ನಂತರ ಪರಿಸರಸ್ನೇಹಿ ಇಟ್ಟಿಗೆಗಳನ್ನು ನಿರ್ಮಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇಂಥ ಇಟ್ಟಿಗೆಗಳೇ ಕಟ್ಟಡ ನಿರ್ಮಾಣಕ್ಕೆ ಬಳಕೆಯಾಗಲಿವೆ.

ಡಿಡಬ್ಲ್ಯು ಗ್ಲೋಬಲ್‌ ಐಡಿಯಾಸ್‌ ಫೇಸ್‌ಬುಕ್‌ ಪುಟದಲ್ಲಿ ಪೋಸ್ಟ್‌ ಮಾಡಿರುವ ವಿಡಿಯೊ ತುಣುಕನ್ನು ಈವರೆಗೆ 27 ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.