ADVERTISEMENT

ಸೊಳ್ಳೆ ಓಡಿಸಲು ಈ ಗಿಡ ಬೆಳೆಸಿರಿ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2017, 19:30 IST
Last Updated 3 ಆಗಸ್ಟ್ 2017, 19:30 IST
ಸೊಳ್ಳೆ ಓಡಿಸಲು ಈ ಗಿಡ ಬೆಳೆಸಿರಿ
ಸೊಳ್ಳೆ ಓಡಿಸಲು ಈ ಗಿಡ ಬೆಳೆಸಿರಿ   

ಮನೆ ಮುಂದೆ ಪುಟ್ಟ ತೋಟ ಮಾಡಿಕೊಂಡು ಚೆಂದ ಚೆಂದದ ಗಿಡ ಬೆಳೆಸಬೇಕು ಎನ್ನುವವರಿಗೆ ಸೊಳ್ಳೆ, ಕ್ರಿಮಿಕೀಟಗಳ ಹಾವಳಿ ಗಿಡ ಬೆಳೆಯುವ ಕನಸು ಸಾಕಾರವಾಗದಂತೆ ಮಾಡುತ್ತದೆ. ಆದರೆ ಕೆಲವೊಂದು ಗಿಡಗಳನ್ನು ತೋಟದ ಮಧ್ಯೆ ನೆಡುವುದರಿಂದ ಸೊಳ್ಳೆಗಳು ಮನೆಗೆ ಬರದಂತೆ ತಡೆಯಬಹುದು. ಇದರಿಂದ ಸೊಳ್ಳೆಗಳಿಂದ ಬರುವ ಹಲವು ಕಾಯಿಲೆಗಳಿಂದ ಮುಕ್ತರಾಗಬಹುದು.

ಕಾಮ ಕಸ್ತೂರಿ ಗಿಡ: ಆಯುರ್ವೇದ ಗುಣ ಹೊಂದಿರುವ ಕಾಮ ಕಸ್ತೂರಿ ಗಿಡ, ಸೊಳ್ಳೆಯ ಹಾವಳಿಯನ್ನು ನಿಯಂತ್ರಿಸುವ ಶಕ್ತಿ ಹೊಂದಿದೆ. ಇದರ ಘಮಕ್ಕೆ ಸೊಳ್ಳೆಗಳು ಕಡಿಮೆಯಾಗುತ್ತವೆ. ಈ ಗಿಡವನ್ನು ಸ್ವಲ್ಪ ಆರೈಕೆ ಮಾಡಿದರೂ ಸಾಕು, ಸಮೃದ್ಧವಾಗಿ ಬೆಳೆಯಬಹುದು. ಚೆನ್ನಾಗಿ ನೀರು ಇಂಗುವ ಮಣ್ಣಿನಲ್ಲಿ ಹುಲುಸಾಗಿ ಬೆಳೆಯುತ್ತದೆ. ಸಸಿಗಳ ಕೆಳಭಾಗದಲ್ಲಿ ತೇವಾಂಶವಿ­ರು­ವಂತೆ ನೋಡಿಕೊಳ್ಳಿ. ಸುಗಂಧಪೂರಿತ ಎಣ್ಣೆಗಾಗಿ ತೋಟಗಳಲ್ಲಿ ಇದನ್ನು ಬೆಳೆಸುತ್ತಾರೆ.

ತುಳಸಿ ಗಿಡ: ತುಳಸಿ ಗಿಡ ಕ್ರಿಮಿಕೀಟಗಳ ಹಾವಳಿ ನಿಯಂತ್ರಿಸುತ್ತದೆ. ತುಳಸಿ ಗಿಡಗಳು ಮನೆಯ ಸುತ್ತ ಮುತ್ತಲೂ ಹೆಚ್ಚಿನ ಪ್ರಮಾಣದಲ್ಲಿದ್ದರೆ ಸೊಳ್ಳೆಗಳ ಕಾಟ ಗಣನೀಯವಾಗಿ ಕಡಿಮೆಯಾಗುತ್ತದೆ. ಸೊಳ್ಳೆ ಕಚ್ಚಿದ ದದ್ದುಗಳಾಗಿದ್ದರೆ ತುಳಸಿ ಎಲೆ, ಕಾಂಡ ಹಾಗೂ ಬೇರುಗಳನ್ನು ಅರೆದು ಲೇಪಿಸಿದರೆ ಬೇಗ ಗುಣವಾಗುತ್ತದೆ.

ADVERTISEMENT

ನಿಂಬೆ ಗಿಡ: ದೇಹದ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣವುಳ್ಳ ‌ನಿಂಬೆಹಣ್ಣು, ಸೊಳ್ಳೆ ಮನೆಯ ಬಳಿ ಸುಳಿಯದಂತೆ ಮಾಡುವ ಶಕ್ತಿಯನ್ನು ಹೊಂದಿದೆ. ಇದರ ಎಲೆಯ ವಾಸನೆಗೆ ಸೊಳ್ಳೆ ನಿಯಂತ್ರಣವಾಗುತ್ತದೆ.

ಪುದೀನ ಗಿಡ: ಪುದೀನ ಚಟ್ನಿ ಮಾಡಲು ಮಾತ್ರವ0ಲ್ಲ, ಸೊಳ್ಳೆಗಳನ್ನು ಓಡಿಸಲು ಉಪಯೋಗಕಾರಿಯಾಗಿದೆ. ಇದರ ಸೊಪ್ಪಿನ ಘಾಟಿಗೆ ಸೊಳ್ಳೆಗಳು ಕಡಿಮೆಯಾಗುತ್ತವೆ.

ಇವುಗಳ ಜೊತೆಗೆ ಚೆಂಡು ಹೂವು, ನೆಕ್ಕಿಸೊಪ್ಪು, ಮಜ್ಜಿಗೆ ಹುಲ್ಲಿನ ಗಿಡಗಳನ್ನು ಬೆಳೆಯುವುದರಿಂದ ಸೊಳ್ಳೆಗಳನ್ನು ನಿಯಂತ್ರಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.