ADVERTISEMENT

ಗುರುವಾರ, 11–5–1967

​ಪ್ರಜಾವಾಣಿ ವಾರ್ತೆ
Published 10 ಮೇ 2017, 19:30 IST
Last Updated 10 ಮೇ 2017, 19:30 IST

ನವದೆಹಲಿ, ಮೇ 10– ‘ಕಾಶ್ಮೀರದ ವಿಷಯದಲ್ಲಿ ಪಾಕಿಸ್ತಾನದೊಡನೆ ಮಾತುಕತೆ ನಡೆಸಬೇಕಾದುದೇನೂ ಇಲ್ಲ. ಆದರೆ ಯಾವ ವಿಷಯದ ಬಗ್ಗೆ ಬೇಕಾದರೂ ಮಾತನಾಡಲು ನಾವು ಸಿದ್ಧ’ ಎಂದು ಪ್ರಧಾನಮಂತ್ರಿ  ಶ್ರೀಮತಿ ಇಂದಿರಾ ಗಾಂಧಿ ಅವರು ಇಂದು ಇಲ್ಲಿ ತಿಳಿಸಿದರು.
ವಿದೇಶಿ ಪತ್ರಿಕಾ ಪ್ರತಿನಿಧಿಗಳ ಸಂಘವು ಏರ್ಪಡಿಸಿದ್ದ ಸತ್ಕಾರ ಕೂಟದಲ್ಲಿ ಮಾತನಾಡುತ್ತಿದ್ದ ಅವರು, ಕಾಶ್ಮೀರದ ಬಗ್ಗೆ ಪಾಕಿಸ್ತಾನದೊಂದಿಗೆ ಮಾತನಾಡಲು ಭಾರತ ಸಿದ್ಧವಿದೆಯೆ? ಎಂಬ ಪ್ರಶ್ನೆಗೆ ಉತ್ತರವಿತ್ತರು.

‘ಅನೇಕ ವಿಷಯಗಳಿರುವಾಗ ಮೊದಲು ಅತ್ಯಂತ ಕಷ್ಟವಾದ ಸಮಸ್ಯೆಯನ್ನು ಯಾರೂ ತೆಗೆದುಕೊಳ್ಳಬಾರದು. ಮೊದಲು ಸ್ನೇಹ ವಾತಾವರಣವನ್ನುಂಟು ಮಾಡಿ, ಬಾಂಧವ್ಯವನ್ನು ಉತ್ತಮಪಡಿಸಿಕೊಂಡು ಆನಂತರ ಉಳಿದ ಸಮಸ್ಯೆಗಳನ್ನು ಪರಿಶೀಲಿಸಬೇಕು’ ಎಂದರು.

ಕಾಲೇಜು ಪ್ರವೇಶಕ್ಕೆ ಕನಿಷ್ಠ16 ವರ್ಷ ವಯೋಮಿತಿ: ವಿಶ್ವವಿದ್ಯಾನಿಲಯದ ನಿಗದಿ

ADVERTISEMENT

ಬೆಂಗಳೂರು, ಮೇ 10– ಶಿಕ್ಷಣ ವರ್ಷಾರಂಭ ಅಕ್ಟೋಬರ್ 1 ರಿಂದ ಮೂರು ವರ್ಷದ ಬಿ.ಎ., ಬಿ.ಎಸ್‌ಸಿ., ಬಿ.ಕಾಂ., ಬಿ.ಎ. ಆನರ್‍ಸ್, ಬಿ.ಎಸ್‌ಸಿ. ಆನರ್‍ಸ್ ಮತ್ತು ಐದು ವರ್ಷದ ಸಂಯೋಜಿತ ಎಂಜಿನಿಯರಿಂಗ್ ಶಿಕ್ಷಣದ ಮೊದಲ ವರ್ಷಕ್ಕೆ ಸೇರಲು ಕನಿಷ್ಠ ವಯೋಮಿತಿ 16 ವರ್ಷ ಇರಬೇಕೆಂದು ಬೆಂಗಳೂರು ವಿಶ್ವವಿದ್ಯಾನಿಲಯ ನಿರ್ಧರಿಸಿದೆ.

ಸ್ಕ್ರೀನಿಂಗ್ ಸಮಿತಿ ಶಿಫಾರಸು ಮಾಡಿ ಪಿ.ಯು.ಸಿ.ಗೆ ಸೇರಿಸಿಕೊಳ್ಳಲಾಗಿರುವ ವಿದ್ಯಾರ್ಥಿಗಳು ಡಿಗ್ರಿ ತರಗತಿಯ ಪ್ರಥಮ ವರ್ಷಕ್ಕೆ ಪ್ರವೇಶಿಸಲು ಈ ಪರಿಮಿತಿ ಅನ್ವಯವಾಗುವುದಿಲ್ಲ. ಸ್ಕ್ರೀನಿಂಗ್ ಸಮಿತಿಯ ಶಿಫಾರಸಿನ ಮೇಲೆ ವಯೋಮಿತಿಯಿಂದ ವಿನಾಯಿತಿ ಪಡೆದು ಪಿ.ಯು.ಸಿ.ಗೆ ಸೇರಿರುವ ವಿದ್ಯಾರ್ಥಿಗಳು ಡಿಗ್ರಿ ಕೋರ್ಸಿಗೆ ಪ್ರವೇಶಿಸುವಾಗ ಮತ್ತೆ ಸಮಿತಿಯ ಮುಂದೆ ಹಾಜರಾಗಬೇಕಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.