ADVERTISEMENT

ಗುರುವಾರ, 17–8–1967

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2017, 19:30 IST
Last Updated 16 ಆಗಸ್ಟ್ 2017, 19:30 IST
ಗುರುವಾರ, 17–8–1967
ಗುರುವಾರ, 17–8–1967   

ಸಕ್ಕರೆ ಮೇಲಿನ ಹತೋಟಿ ಭಾಗಶಃ ರದ್ದು
ನವದೆಹಲಿ, ಆ. 16–
ಸಕ್ಕರೆಯ ಮೇಲಿನ ನಿಯಂತ್ರಣವನ್ನು ಭಾಗಶಃ ರದ್ದುಪಡಿಸಲಿದೆ. ಬಹಿರಂಗ ಪೇಟೆಯಲ್ಲಿ ಮಾರಾಟ ಮಾಡಲು ಉತ್ಪಾದನೆಯ ಶೇಕಡಾ 40 ರಷ್ಟು ಭಾಗವನ್ನು ಕಾರ್ಖಾನೆಗಳಿಗೇ ಬಿಡುವ 1967–68ರ ಹೊಸ ಸಕ್ಕರೆ ನೀತಿಯನ್ನು ಇಂದು ಪ್ರಕಟಿಸಲಾಗಿದೆ.

ಶೇಕಡಾ 60 ರಷ್ಟು ನಿಯಂತ್ರಿಕ ಬೆಲೆಯಲ್ಲಿ ಗೃಹ ಬಳಕೆಗೆ ದೊರೆಯಲಿದೆ. ಕಬ್ಬಿನ ಕನಿಷ್ಠ ಬೆಲೆಯನ್ನು ಮಣಕ್ಕೆ 2.75 ರೂ. ನಷ್ಟು ಹೆಚ್ಚಿಸಲಾಯಿತಲ್ಲದೆ ಕಾರ್ಖಾನೆಗಳಲ್ಲಿ ಉತ್ಪಾದನೆಯಾದ ಸಕ್ಕರೆಯ ಮೂಲ ಅಬ್ಕಾರಿ ಸುಂಕವನ್ನು ಕ್ವಿಂಟಾಲ್‌ಗೆ. 8.35 ರೂ. ನಷ್ಟು ಕಡಿಮೆ ಮಾಡಲಾಗಿದೆ.

ನೆರೆಯ ರಾಷ್ಟ್ರಗಳೊಡನೆ ಭಾರತವು ಶಾಂತಿ, ಸೌಹಾರ್ದ ಬಯಸುವುದಾಗಿ ಇಂದಿರಾ
ನವದೆಹಲಿ, ಆ. 16–
ಭಾರತವು ಎಲ್ಲಾ ರಾಷ್ಟ್ರಗಳೊಡನೆ, ಮುಖ್ಯವಾಗಿ ತನ್ನ ನೆರೆಯ ರಾಷ್ಟ್ರಗಳೊಡನೆ ಶಾಂತಿ ಮತ್ತು ಸೌಹಾರ್ದ ಬಯಸುವುದೆಂದೂ, ರಾಷ್ಟ್ರದ ಮೇಲೆ ಒಂದು ಪಕ್ಷ ಸಶಸ್ತ್ರ ದಾಳಿ ನಡೆದ ಪಕ್ಷದಲ್ಲಿ ಆ ಸವಾಲನ್ನು ನಾವು ಎದುರಿಸುವೆವೆಂದೂ ಪ್ರಧಾನಮಂತ್ರಿ ಶ್ರೀಮತಿ ಇಂದಿರಾಗಾಂಧಿಯವರು ನಿನ್ನೆ ಇಲ್ಲಿ ಘೋಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.