ADVERTISEMENT

ಗುರುವಾರ 9–3–1967

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2017, 19:30 IST
Last Updated 8 ಮಾರ್ಚ್ 2017, 19:30 IST

ಉಪ ಪ್ರಧಾನ ಮಂತ್ರಿಯಾಗಿ ಮುರಾರ್ಜಿ?
ನವದೆಹಲಿ, ಮಾ. 8–  ಕಾಂಗ್ರೆಸ್‌ ಪಾರ್ಲಿಮೆಂಟರಿ ಪಕ್ಷದ ನಾಯಕನನ್ನು ಸರ್ವಾನುಮತದಿಂದ ಚುನಾಯಿಸುವುದಕ್ಕೆ ಹಾದಿ ಮಾಡಿಕೊಡುವ ರಾಜಿ ಸೂತ್ರ ವೊಂದನ್ನು ಕಾಮರಾಜ್‌ ಮತ್ತು ಸಿಂಡಿಕೇಟಿನ ಇತರ ಸದಸ್ಯರು ರೂಪಿಸಿದ್ದಾರೆ.

ಪ್ರಧಾನಮಂತ್ರಿ ಇಂದಿರಾ ಗಾಂಧಿ ಅಥವ ಮುರಾರಜಿ ದೇಸಾಯಿರವರ ಆತ್ಮ ಗೌರವಕ್ಕೆ ಕುಂದಾಗದಂಥ ರೀತಿಯಲ್ಲಿ ಈ ಸೂತ್ರವನ್ನು ರೂಪಿಸಲಾಗಿದೆಯೆಂದು ಹೇಳಲಾಗಿದೆ. ಈ ಸೂತ್ರದ ಪ್ರಕಾರ ಶ್ರೀಮತಿ ಇಂದಿರಾ ಗಾಂಧಿಯವರು ಪ್ರಧಾನಮಂತ್ರಿಯಾಗಿ ಮುಂದುವರೆಯುತ್ತಾರೆ. ಇದಲ್ಲದೆ ಮುರಾರಜಿ ದೇಸಾಯಿರನ್ನು ಉಪ ಪ್ರಧಾನಮಂತ್ರಿಯನ್ನಾಗಿ ನೇಮಕ ಮಾಡಲಾಗುತ್ತದೆ. ಪ್ರಮುಖ ನೀತಿಗಳ ಸಂಬಂಧದಲ್ಲಿ ನಿರ್ಧಾರ ಕೈಗೊಳ್ಳುವುದಕ್ಕಾಗಿ ಮೂವರ ಸಮಿತಿಯೊಂದನ್ನು ನೇಮಕ ಮಾಡಲಾಗುವುದು. ಸಮಿತಿಯಲ್ಲಿ ಇಂದಿರಾ, ಮುರಾರಜಿ ಮತ್ತು ಕಾಮರಾಜರು ಸದಸ್ಯರಾಗಿರುತ್ತಾರೆ.

ಕಾಂಗ್ರೆಸ್ಸೇತರ ಸರಕಾರಗಳಿಗೆ ಕೇಂದ್ರದ ಸಹಕಾರ
ನವದೆಹಲಿ, ಮಾ. 8– ಕಾಂಗ್ರೆಸ್‌ ಬಹುಮತ ಗಳಿಸದಿರುವ ರಾಜ್ಯಗಳಿಗೆ ಮಂತ್ರಿಮಂಡಲ ರಚನೆ ಸಂಬಂಧದಲ್ಲಿ ಕೇಂದ್ರ ಸರಕಾರದ ನಿಲುವನ್ನು ಸ್ಪಷ್ಟಪಡಿಸಿರುವುದಾಗಿ ಪ್ರಧಾನಮಂತ್ರಿ ಯವರ ನಿಕಟ ಸಂಪರ್ಕ ಹೊಂದಿರುವ ಮೂಲಗಳು ತಿಳಿಸಿವೆ.
ಮತದಾರರ ಅಪೇಕ್ಷೆಗೆ ಮನ್ನಣೆ ನೀಡಬೇಕು. ಪ್ರಜಾಸತ್ತಾತ್ಮಕ ವ್ಯವಸ್ಥೆ ಸುಗಮವಾಗಿ ನಡೆಯಬೇಕು ಎಂದು ಪ್ರಧಾನಮಂತ್ರಿಗಳು ಮೊದಲಿನಿಂದ ತಿಳಿಸುತ್ತಿರುವುದಾಗಿ ಮೂಲಗಳು ತಿಳಿಸಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.