ADVERTISEMENT

ಬುಧವಾರ, 18–1–1967

50 ವರ್ಷಗಳ ಹಿಂದೆ

​ಪ್ರಜಾವಾಣಿ ವಾರ್ತೆ
Published 17 ಜನವರಿ 2017, 19:30 IST
Last Updated 17 ಜನವರಿ 2017, 19:30 IST

ಕೇಂದ್ರಾಡಳಿತದಲ್ಲೇ ಉಳಿಯಲು ದಮನ್‌, ದೀವ್‌ ನಿರ್‍ಧಾರ
ದಮನ್‌, ಜ. 17–
ನೆರೆಯ ಗುಜರಾತ್‌ ರಾಜ್ಯದಲ್ಲಿ ವಿಲೀನವಾಗದೆ ಕೇಂದ್ರದ ಆಡಳಿತಕ್ಕೆ ಸೇರಿದ ಪ್ರದೇಶವಾಗಿ ಮುಂದುವರಿಯಲು ದಮನ್‌ ಮತ್ತು ದೀವ್‌ ಜನರು
ಬಹು ಭಾರಿ ಬಹುಮತದಿಂದ ನಿರ್ಧರಿಸಿದ್ದಾರೆ. ನಿನ್ನೆ ನಡೆದ ಜನಮತ ಸಂಗ್ರಹದಲ್ಲಿ ಮತ ನೀಡಿದ 9671 ಮಂದಿ ಮತದಾರರ ಪೈಕಿ 8254 ಮಂದಿ ದಮನ್‌ ಕೇಂದ್ರಾಡಳಿತದ ಪ್ರದೇಶವಾಗಿ ಉಳಿಯಲೂ, 1149 ಮಂದಿ ಗುಜರಾತಿನೊಡನೆ ವಿಲೀನವಾಗುವುದರ ಪರವಾಗಿಯೂ ಮತ ನೀಡಿದರು.

***
ಮಾವೋ ನಿಧನ?
ಹಾಂಕಾಂಗ್‌, ಜ. 17–
ಮಾವೋತ್ಸೆ ತುಂಗ್‌ ಅವರು ಮೃತರಾದರು ಎನ್ನುವ ಸುದ್ದಿ ನಿನ್ನೆ ಕ್ಯಾಂಟನ್‌ ನಗರದಲ್ಲಿ ಹರಡಿತ್ತೆಂದು ಇಂಗ್ಲೀಷ್‌ ಪತ್ರಿಕೆ ‘ಹಾಂಕಾಂಗ್‌ ಸ್ಟಾರ್‌’ ಇಂದು ವರದಿ ಮಾಡಿದೆ. ಈ ಸುದ್ದಿಯನ್ನು ರೆಡ್‌ಗಾರ್ಡ್‌ಗಳು ಅಲ್ಲಗಳೆದಿರುವುದನ್ನು ಈ ಪತ್ರಿಕೆ ಪ್ರಕಟಿಸಿದೆ.

ದಕ್ಷಿಣ ಚೀನಾದಲ್ಲಿರುವ ಕ್ಯಾಂಟನ್‌ನಿಂದ ಇಂದು ಹಾಂಕಾಂಗಿಗೆ ಬಂದ ಚೀನೀಯರು ಈ ಸುದ್ದಿಯನ್ನು ತಿಳಿಸಿದುದಾಗಿ ಸ್ಟಾರ್‌ ತಿಳಿಸಿದೆ. ‘ಕ್ಯಾಂಟನ್‌ ನಗರದಲ್ಲಿ ಮಾವೋ ಸುದ್ದಿ ಹರಡುತ್ತಿದ್ದಂತೆ ಸಾವಿರಾರು ಜನ ಬೀದಿಗಳಲ್ಲಿ ಸೇರಿದರು. ಅನೇಕರು ಗಳಗಳನೆ ಅತ್ತುಬಿಟ್ಟರು’ ಎಂದು ಒಬ್ಬ ಚೀನಾ ಪ್ರಯಾಣಿಕ ತಿಳಿಸಿದ್ದಾನೆ. ‘ಆನಂತರ ರೆಡ್‌ಗಾರ್ಡ್‌ಗಳು ಟ್ರಕ್‌ಗಳಲ್ಲಿ ಕಾಲ್ನಡಿಗೆಯಲ್ಲಿ ರಸ್ತೆಗಳಲ್ಲಿ ಸಂಚರಿಸಿ ಧ್ವನಿವರ್ಧಕಗಳ ಮೂಲಕ ಸುದ್ದಿ ನಿಜವಲ್ಲವೆಂದು ತಿಳಿಸಿದರು’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.