ADVERTISEMENT

ಮಂಗಳವಾರ, 17–10–1967

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2017, 19:30 IST
Last Updated 16 ಅಕ್ಟೋಬರ್ 2017, 19:30 IST

* ಬೆಲ್ಗ್ರೇಡ್‌ನಿಂದ ಭಾರತಕ್ಕೆ ಇನ್ನೂ ಮೂರು ನೌಕೆ
ನವದೆಹಲಿ, ಅ. 16–
ಭಾರತವು ಯುಗೊಸ್ಲಾವಿಯಾದಿಂದ ಇನ್ನೂ ಮೂರು ನೌಕೆಗಳನ್ನು ಕೊಳ್ಳುತ್ತದೆ ಎಂದು ಕೇಂದ್ರದ ಸಾರಿಗೆ ಮತ್ತು ನೌಕಾ ಸಾರಿಗೆ ಸಚಿವ ಡಾ. ವಿ.ಕೆ.ಆರ್.ವಿ. ರಾವ್ ಅವರು ಇಂದು ಇಲ್ಲಿ ತಿಳಿಸಿದರು.

ತಮ್ಮ ಇತ್ತೀಚಿನ ವಿದೇಶ ಪ್ರವಾಸದ ಸಮಯದಲ್ಲಿ ಬೆಲ್‌ಗ್ರೇಡ್‌ಗೆ ಭೇಟಿ ಕೊಟ್ಟಿದ್ದಾಗ ಈ ಬಗ್ಗೆ ಒಪ್ಪಂದವೊಂದಕ್ಕೆ ತಾವು ಸಹಿ ಮಾಡಿದುದಾಗಿ ಇವರು ತಿಳಿಸಿದರು.

* ಬಳ್ಳಾರಿ – ಹೊಸಪೇಟೆ ಶ್ರೇಷ್ಠ ದರ್ಜೆ ಕಬ್ಬಿಣದ ಅದುರಿಗೆ ವಿಶ್ವಾದ್ಯಂತ ಒಳ್ಳೆಯ ಮಾರುಕಟ್ಟೆ (ಪ್ರಜಾವಾಣಿ ಪ್ರತಿನಿಧಿಯಿಂದ)
ನವದೆಹಲಿ, ಅ. 16– ಬಳ್ಳಾರಿ –
ಹೊಸಪೇಟೆ ವಿಭಾಗದಲ್ಲಿ ಸಿಗುವ ಶ್ರೇಷ್ಠ ದರ್ಜೆಯ ಕಬ್ಬಿಣದ ಆದುರು ವಿಶ್ವಾದ್ಯಂತ ಹೆಸರು ಪಡೆದಿದೆ.

ADVERTISEMENT

ಹೊಸ ಹಡಗುಗಳಿಗಾಗಿ ಬೇಡಿಕೆ ಮತ್ತು ಭಾರತದ ಬಂದರುಗಳನ್ನು ಅಭಿವೃದ್ಧಿಪಡಿಸುವ ಬಗ್ಗೆ ಬ್ರಿಟನ್, ಪಶ್ಚಿಮ ಜರ್ಮನಿ, ಹಾಲೆಂಡ್, ಅಮೆರಿಕ ಮತ್ತು ಯುಗೊಸ್ಲಾವಿಯಾಕ್ಕೆ ಇತ್ತೀಚೆಗೆ ಭೇಟಿಯಿತ್ತ ಸಂದರ್ಭದಲ್ಲಿ ಭಾರತ ಸರ್ಕಾರದ ನೌಕಾ ಸಚಿವ ಪ್ರೊ. ವಿ.ಕೆ.ಆರ್.ವಿ. ರಾವ್ ಅವರು ಭಾರತದ ಕಬ್ಬಿಣ ಅದುರಿಗೆ
ಅವಕಾಶ ಇರುವುದನ್ನು ಕಂಡು ಕೊಂಡಿದ್ದಾರೆ.

* ಧಾನ್ಯಕ್ಕೆ ಹೆಚ್ಚು ಬೆಲೆಗಾಗಿ ನಾಲ್ಕು ರಾಜ್ಯಗಳ ಆಗ್ರಹ: ಕೇಂದ್ರಕ್ಕೆ ಪೇಚು(ಎಸ್. ಕುಮಾರ್‌ದೇವ್ ಅವರಿಂದ)‌
ನವದೆಹಲಿ, ಅ. 16–
ಮುಂದಿನ ಸುಗ್ಗಿಗೆ ಅನ್ವಯಿಸುವಂತೆ ಕೇಂದ್ರ ಸರಕಾರ ನಿಗದಿಗೊಳಿಸಿರುವ ಧಾನ್ಯ ಕೊಳ್ಳುವ ಬೆಲೆಗಳನ್ನು ಒಪ್ಪಿಕೊಳ್ಳಲು ಪಂಜಾಬ್, ಹರಿಯಾನಾ, ಮಧ್ಯ ಪ್ರದೇಶ ಮತ್ತು ಬಿಹಾರ ಸರಕಾರಗಳು ನಿರಾಕರಿಸಿರುವುದರಿಂದ ಕೇಂದ್ರ ಸರಕಾರ ಪೇಚಿನ ಪರಿಸ್ಥಿತಿಗೆ ಸಿಕ್ಕಿ ಹಾಕಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.