ADVERTISEMENT

ವಿಚ್ಛಿದ್ರ ಪ್ರವೃತ್ತಿ ದಮನಕ್ಕೆ ಮುಖ್ಯಮಂತ್ರಿ ಕರೆ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2017, 19:30 IST
Last Updated 31 ಅಕ್ಟೋಬರ್ 2017, 19:30 IST

ವಿಚ್ಛಿದ್ರ ಪ್ರವೃತ್ತಿ ದಮನಕ್ಕೆ ಮುಖ್ಯಮಂತ್ರಿ ಕರೆ
ಬೆಂಗಳೂರು, ಅ. 31– ಭಾಷಾ ದುರಭಿಮಾನ, ಪ್ರಾದೇಶಿಕ ಸಂಕುಚಿತ ಭಾವನೆ ಮತ್ತು ವಿಚ್ಛದ್ರಕಾರಕ ಪ್ರವೃತ್ತಿಗಳು ತಲೆ ಎತ್ತುತ್ತಿರುವ ಬಗ್ಗೆ ಮುಖ್ಯಮಂತ್ರಿ ಶ್ರೀ ಎಸ್. ನಿಜಲಿಂಗಪ್ಪನವರು ವಿಷಾದಿಸಿ ರಾಜ್ಯೋತ್ಸವದ ಈ ಶುಭ ದಿನದಂದು ಮೈಸೂರಿನ ಜನ ಭಾರತದ ಭವ್ಯ ಭವಿ

ಷ್ಯಕ್ಕಾಗಿ ಇತರ ರಾಜ್ಯಗಳೊಡಗೂಡಿ ಕೆಲಸ ಮಾಡಲು ತಮ್ಮನ್ನು ಪುನಸ್ಸಮರ್ಪಣೆ ಮಾಡಿಕೊಳ್ಳುತ್ತಿರುವರೆಂದು ಹೇಳಿದ್ದಾರೆ.

ರಾಜ್ಯೋತ್ಸವ ಸಂಬಂಧದಲ್ಲಿ ಸಂದೇಶ ನೀಡಿರುವ ಶ್ರೀ ನಿಜಲಿಂಗಪ್ಪನವರು ಸಂಕುಚಿತ ಭಾವನೆಗಳು ತಲೆ ಎತ್ತುತ್ತಿರುವುದು ದುರದೃಷ್ಟಕರವೆಂದೂ ಈ ಅನಿಷ್ಟ ಶಕ್ತಿಗಳನ್ನು ನಿರ್ದಾಕ್ಷಿಣ್ಯವಾಗಿ ಮಟ್ಟಹಾಕಬೇಕೆಂದೂ ತಿಳಿಸಿದ್ದಾರೆ.

ADVERTISEMENT

ಭಾಷೆ ಬೆಳೆವ ವೇಗ ಸಾಲದು
ಬೆಂಗಳೂರು, ಅ. 31– ‘ನನ್ನದೂ ಅದೇ ಅಭಿಪ್ರಾಯ’ ಮುಖ್ಯಮಂತ್ರಿ ನಿಜಲಿಂಗಪ್ಪ ಅವರು ಹೇಳಿ ಸುಮ್ಮನಾದರು. ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ‘ಪ್ರಜಾವಾಣಿ’ಗಿತ್ತ ವಿಶೇಷ ಸಂದರ್ಶನದಲ್ಲಿ ಕನ್ನಡ ಭಾಷೆಯ ಬೆಳವಣಿಗೆ ಸಾಕಷ್ಟು ವೇಗದಲ್ಲಿ ಆಗುತ್ತಿಲ್ಲ ಎಂಬ ಆಕ್ಷೇಪಣೆ ಸಾರ್ವಜನಿಕರಲ್ಲಿದೆ. ಮುಖ್ಯಮಂತ್ರಿಗಳಾದ ತಾವು ಏನು ಹೇಳುವಿರಿ? ಎಂದು ಕೇಳಿದಾಗ ವಿಷಯದ ಪ್ರಸ್ತಾಪವನ್ನು ಅಲ್ಲಿಗೇ ಮುಗಿಸಿಬಿಟ್ಟು, ಉತ್ತರ ನೀಡಿದರು.

ಇದಕ್ಕೆ ಯಾರು ಹೊಣೆ?

ಮುಖ್ಯಮಂತ್ರಿಗಳು ನಕ್ಕು ‘ಎಲ್ಲರೂ ಕಾರಣ’ ಎಂದರು.

ಕೇಂದ್ರಕ್ಕೆ ಮಹಾರಾಷ್ಟ್ರ ಸರ್ಕಾರದ ಪತ್ರ: ಈ ತಿಂಗಳ 7ರೊಳಗೆ ಮಹಾಜನ್ ವರದಿ ಪ್ರಕಟಣೆಗೆ ಒತ್ತಾಯ
ಮುಂಬಯಿ, ಅ. 31– ನಾಗಪುರದಲ್ಲಿ ನವೆಂಬರ್ ಏಳರಂದು ಆರಂಭವಾಗುವ ಮಹಾರಾಷ್ಟ್ರ ಶಾಸನಸಭೆಯ ಚಳಿಗಾಲದ ಅಧಿವೇಶನಕ್ಕೆ ಮುಂಚೆ ಮೈಸೂರು–ಮಹಾರಾಷ್ಟ್ರ ಗಡಿ ಬಗ್ಗೆ ಮಹಾಜನ್ ವರದಿಯನ್ನು ಪ್ರಕಟಿಸಬೇಕೆಂದು ಒತ್ತಾಯಪಡಿಸಿ ಕೇಂದ್ರ ಸರ್ಕಾರಕ್ಕೆ ಮಹಾರಾಷ್ಟ್ರ ಸರ್ಕಾರ ಪತ್ರ ಬರೆಯಲಿದೆ.

ಮಹಾರಾಷ್ಟ್ರದ ವಿರೋಧ ಪಕ್ಷಗಳ ನಾಯಕರೊಡನೆ ಇಂದು ಮಹಾರಾಷ್ಟ್ರ ಮುಖ್ಯಮಂತ್ರಿ ಶ್ರೀ ನಾಯಕ್‌ರವರು ನಡೆಸಿದ ಒಂದು ಗಂಟೆಯ ಮಾತುಕತೆಯ ನಂತರ ಈ ವಿಷಯವನ್ನು ಪತ್ರಕರ್ತರಿಗೆ ತಿಳಿಸಿದರು.

ಕಾಸ್ಮೋಸ್ 186 ಧರೆಗೆ
ಮಾಸ್ಕೊ, ಅ. 31–
ಕಾಸ್ಮೋಸ್ 188 ಅಂತರಿಕ್ಷ ನೌಕೆಯ ಜೊತೆ ಕಕ್ಷೆಯಲ್ಲಿ ಸಂಚರಿಸಿದ ಮಾನವರಹಿತ ಉಪಗ್ರಹ ಕಾಸ್ಮೋಸ್‌ 186 ಧರೆಗಿಳಿಯಿತೆಂದು ಮಾಸ್ಕೊ ರೇಡಿಯೋಇಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.