ADVERTISEMENT

ಆತಂಕದ ಸಂಗತಿ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2017, 19:30 IST
Last Updated 28 ಏಪ್ರಿಲ್ 2017, 19:30 IST

ಸರ್ಕಾರಿ ಸೇವೆಗಳನ್ನು ಪಡೆಯಲು ಕಳೆದ ವರ್ಷ ಅತಿಹೆಚ್ಚು ಲಂಚಗುಳಿತನ ಅನುಭವಕ್ಕೆ ಬಂದಿರುವ 20 ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿರುವುದು (ಪ್ರ.ವಾ., ಏ. 28) ಆತಂಕದ ಸಂಗತಿ.

ಲಂಚ ಕೇಳುವುದು ಮತ್ತು ಪಡೆಯುವುದು ಹಿಂದೊಂದು ಕಾಲದಲ್ಲಿ ಗುಟ್ಟಿನ ಸಂಗತಿಯಾಗಿತ್ತು. ಈಗ ಅಂಜಿಕೆ, ನಾಚಿಕೆ ಎಂಥದ್ದೂ ಇಲ್ಲ. ದರ್ಪದಿಂದ ಕೇಳಿ ಹಫ್ತಾ ವಸೂಲಿ ಮಾಡಿದಂತೆ ಲಂಚ ಪೀಕುತ್ತಾರೆ. ಅದಕ್ಕೆ ಸಾಮಾಜಿಕ ಮನ್ನಣೆಯೂ ದೊರೆತಂತಿದೆ ಎಂಬುದು ಗಂಭೀರವಾಗಿ ಯೋಚಿಸಬೇಕಾದ ಮತ್ತು ಚಿಂತೆಗೆ ಈಡುಮಾಡುವ ಸಂಗತಿ.

ಹೇಗಾದರೂ ಸರಿ, ದುಡ್ಡು ಕೂಡಿಡಬೇಕು ಎಂಬ ಮನೋಭಾವ ಹೆಚ್ಚುತ್ತಿದೆ. ದುಡ್ಡು ಸೇರಿದರೆ ಮರ್ಯಾದೆ ತಾನಾಗಿಯೇ ಬರುತ್ತದೆ. ಸಂಪಾದನೆಯ ಮೂಲ ಮತ್ತು ಮಾರ್ಗದ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ದುಡ್ಡು ಇದ್ದವನೇ ದೊಡ್ಡಪ್ಪ ಎಂಬ ಮಾತು ಈಗ ನಿಜವಾದಂತಿದೆ. ಇದು ಅತ್ಯಂತ ಅಪಾಯಕಾರಿ.
–ಎಸ್‌.ವಿ. ಸಂತೋಷಕುಮಾರ್‌, ಶಿವಮೊಗ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.