ADVERTISEMENT

ಇತರರು ಅಪ್ರಬುದ್ಧರೇ?

ಮಲ್ಲಿಕಾರ್ಜುನ ಹುಲಗಬಾಳಿ
Published 23 ಜೂನ್ 2015, 19:30 IST
Last Updated 23 ಜೂನ್ 2015, 19:30 IST

ಮೈಸೂರಿನ ಸಂಸದ ಪ್ರತಾಪಸಿಂಹ ಅವರನ್ನು ಟೀಕಿಸುವ ಭರದಲ್ಲಿ ಬಂಜಗೆರೆ ಜಯಪ್ರಕಾಶ್‌ ಅವರು ‘ಮೈಸೂರಿನ ಒಕ್ಕಲಿಗರು ಹಾಗೂ ಲಿಂಗಾಯತರು ರಾಜ್ಯದ ಇತರ ಭಾಗಗಳಂಥವರಲ್ಲ. ಇವರಿಗೆ 200 ವರ್ಷಗಳ ರಾಜಕೀಯ ಪ್ರಜ್ಞೆ ಇದೆ’ (ಪ್ರ.ವಾ., ಜೂನ್ 22) ಎಂದು ಹೇಳಿರುವುದು ವಿಷಾದನೀಯ. ಹಾಗಿದ್ದರೆ ಇನ್ನುಳಿದ ಭಾಗಗಳಲ್ಲಿನ ಜನರು ಅಪ್ರಬುದ್ಧರೆಂದು ಅರ್ಥವೇ? ಯಾರನ್ನಾದರೂ ಹೊಗಳುವುದಕ್ಕೆ ಅಥವಾ ತೆಗಳುವುದಕ್ಕೆ ಒಂದು ತರ್ಕದ ನೆಲೆಗಟ್ಟು ಬೇಡವೆ?

ಯಾವ ಮಾನದಂಡವನ್ನು ಇಟ್ಟುಕೊಂಡು ಪ್ರದೇಶವಾರು ಸಮುದಾಯದ ರಾಜಕೀಯ ಪ್ರಜ್ಞೆಯನ್ನು ಅವರು ಅಳೆದರು? ಇದರಿಂದ ಮೈಸೂರಿನ ಈ ಉಭಯ ಸಮುದಾಯದವರನ್ನು ಮೇಲಕ್ಕೇರಿಸಿ, ಮಿಕ್ಕ ಪ್ರದೇಶಗಳಲ್ಲಿನ ಮತದಾರರನ್ನು ಅವಮಾನಿಸಿದಂತೆ ಆಗಲಿಲ್ಲವೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.