ADVERTISEMENT

ಉಚಿತ ಇಂಟರ್ನೆಟ್‌

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2016, 19:30 IST
Last Updated 4 ಡಿಸೆಂಬರ್ 2016, 19:30 IST

ಪ್ರಧಾನಿ ನರೇಂದ್ರ ಮೋದಿಯವರ ನೋಟ್‌ ರದ್ದತಿ ಕ್ರಮವು ಭ್ರಷ್ಟಾಚಾರ ರಹಿತ ವ್ಯವಸ್ಥೆಯನ್ನು ಜಾರಿಗೆ ತರುವ ‘ಡಿಜಿಟಲ್ ಇಂಡಿಯಾ’ ಪ್ರಯತ್ನಕ್ಕೆ ಮುನ್ನುಡಿಯಾಗಿದೆ. ಆದರೆ ಇದರ ಪರಿಣಾಮಕಾರಿ ಅನುಷ್ಠಾನಕ್ಕೆ ಹಲವಾರು ಅಡಚಣೆಗಳಿವೆ.

ದೇಶದ ನಾಗರಿಕರಲ್ಲಿ ಬಹಳಷ್ಟು ಜನ ಇಂಟರ್‌ನೆಟ್‌ ಬಳಸುತ್ತಿಲ್ಲ. ಸಕಲವನ್ನೂ ನಗದುರಹಿತ ವ್ಯವಹಾರಕ್ಕೆ ಒಳಪಡಿಸಬೇಕಾದರೆ ಇಂಟರ್‌ನೆಟ್‌ ಅನಿವಾರ್ಯ. ಇದಕ್ಕಾಗಿ ತಿಂಗಳಿಗೆ ಕನಿಷ್ಠವೆಂದರೂ ₹ 100ರಿಂದ 150 ವ್ಯಯಿಸಬೇಕಾಗುತ್ತದೆ.  ಇದು ಸಾಮಾನ್ಯರಿಗೆ ಕಷ್ಟಸಾಧ್ಯ.

ಇನ್ನು ಕೆಲವು ಜನರ ಬಳಿ ಸ್ಮಾರ್ಟ್‌ಫೋನ್‌ ಇದ್ದರೂ ಅವರಿಗೆ ನಗದುರಹಿತ ವ್ಯವಹಾರದ ಮಾಹಿತಿ ಇಲ್ಲ. ಹೀಗಾಗಿ ಮೊಬೈಲ್‌ ಬ್ಯಾಂಕಿಂಗ್‌, ನೆಟ್ ಬ್ಯಾಂಕಿಂಗ್‌, ವಾಲೆಟ್‌ ಮುಂತಾದವುಗಳ ಮೂಲಕ ವ್ಯವಹರಿಸುವುದಕ್ಕಾಗಿ ಸರ್ಕಾರ ಜನಸಾಮಾನ್ಯರಿಗೆ ಉಚಿತ ಇಂಟರ್‌ನೆಟ್  ಸೌಲಭ್ಯ ಕೊಡುವ ವ್ಯವಸ್ಥೆಯಾಗಬೇಕು.

ಶಾಲಾ ಕಾಲೇಜು ಮಕ್ಕಳಿಗೆ ನಗದು ರಹಿತ ವ್ಯವಸ್ಥೆಯ ಬಗ್ಗೆ ತರಬೇತಿ ಕೊಡಬೇಕು. ಮನೆಯ ಸದಸ್ಯರಿಗೆ ಮಕ್ಕಳು ಮಾಹಿತಿ ನೀಡುತ್ತಾರೆ. ಇಂತಹ ಕ್ರಮಗಳನ್ನು ಕೈಗೊಂಡು ವ್ಯಾಪಕ ಪ್ರಚಾರ ನಡೆಸಿದರೆ ‘ಡಿಜಿಟಲ್‌ ಇಂಡಿಯಾ’ ಕನಸು ಬಹುಬೇಗನೆ ನನಸಾಗಲು ಸಾಧ್ಯ.
-ಶಂಕರ್ ವು. ಸಬಿನಾಳ, ಗುಳೇದಗುಡ್ಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.